ಸ್ವರಾಜ್ ಇಂಡಿಯಾ ಪಕ್ಷದ ಪ್ರಣಾಳಿಕೆ ಬಿಡುಗಡೆ

Swaraj India party releasesed manifesto

08-05-2018

ಮೈಸೂರು: ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರಾಧ್ಯಕ್ಷ ಯೋಗೇಂದ್ರ ಯಾದವ್ ಮೈಸೂರಲ್ಲಿ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಯಾದವ್, ನಮ್ಮದು ಕಾಂಗ್ರೆಸ್ ಮುಕ್ತ ಕರ್ನಾಟಕ ಅಲ್ಲ. ಮೋದಿ ಮುಕ್ತ ಕರ್ನಾಟಕ ಅಲ್ಲವೇ ಅಲ್ಲ. ರೈತರ ಆತ್ಮಹತ್ಯೆ ಮುಕ್ತ ಕರ್ನಾಟಕ, ರೈತರ ಸಾಲ ಮುಕ್ತ ಕರ್ನಾಟಕ, ಜಲ ಸಮಸ್ಯೆ ಮುಕ್ತ ಕರ್ನಾಟಕ, ನಿರುದ್ಯೋಗ ಮುಕ್ತ ಕರ್ನಾಟಕ, ಶಿಕ್ಷಣ ವಂಚಿತ ಮುಕ್ತ ಕರ್ನಾಟಕ, ಜಾತಿ ಮುಕ್ತ ಕರ್ನಾಟಕ,  ಉತ್ತಮ ಶಿಕ್ಷಣ ನಮ್ಮ ಸ್ವರಾಜ್ ಇಂಡಿಯಾ ಪಕ್ಷದ ಪ್ರಮುಖ ಅಂಶಗಳು ಎಂದು ಹೇಳಿದ್ದಾರೆ.

ಇಂದು ದೇಶದಲ್ಲಿ ಅತಂಕ ಮನೆ ಮಾಡಿದೆ. ದೇಶದಲ್ಲಿ ವಿರೋಧ ಪಕ್ಷ ಅಸ್ತಿತ್ವದಲ್ಲಿ ಇಲ್ಲ. ದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹಾಗೂ ದಲಿತರ ಮೇಲಿನ ದೌರ್ಜನ್ಯದ ಪರ ದನಿ ಎತ್ತುವಲ್ಲಿ ವಿಫಲವಾಗಿದೆ. ದೇಶಕ್ಕೆ ಬಲಿಷ್ಠ ವಿರೋಧ ಪಕ್ಷ ಬೇಕಾಗಿದೆ. ಸಂಘಟನೆ ಹಾಗೂ ಚಳವಳಿಗಳು ದೇಶದಲ್ಲಿ ವಿರೋಧ ಪಕ್ಷ ಆಗಿದೆ. ದೇಶಕ್ಕೆ ಹೊಸ ಪಕ್ಷದ ಅವಶ್ಯಕತೆ ಇದೆ. ಮೂರು ಪಕ್ಷಗಳು ಕೂಡ ಜನರ ಪರ ಧನಿ ಎತ್ತುತ್ತಿಲ್ಲ. ದೇಶದಲ್ಲಿ ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಪಕ್ಷ ಚಿನ್ನದ ಪದಕ ‌ಪಡೆದಿದೆ. ಕರ್ನಾಟಕದಲ್ಲಿ ಬಿಜೆಪಿಯ ಯಡಿಯೂರಪ್ಪ ಚಿನ್ನದ ಪದಕ ಪಡೆದಿದ್ದಾರೆ. ರಾಜ್ಯದಲ್ಲಿ ಪಕ್ಷಗಳು ಅರೋಪ ಪ್ರತ್ಯರೋಪದಲ್ಲಿ ತೊಡಗಿದೆ. ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ಆಗಿದೆ. ಈ ವಿಚಾರದ ಬಗ್ಗೆ ಯಾರು ಮಾತನಾಡುತ್ತಿಲ್ಲ. ಮೂರು ಪಕ್ಷಗಳಿಗಿಂತ ಶೋಷಿತರ ಪರವಾಗಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ. ಸ್ವರಾಜ್ ಇಂಡಿಯಾ ಪಕ್ಷ ಅಭಿವೃದ್ಧಿಗೆ ಹೊಸ ರೂಪ ಕೊಟ್ಟಿದೆ. ಬರ ಮುಕ್ತ ಕರ್ನಾಟಕ ನಮ್ಮ ಗುರಿ ಎಂದರು.

 

 


ಸಂಬಂಧಿತ ಟ್ಯಾಗ್ಗಳು

Yogendra Yadav Swaraj Abhiyan ಶೋಷಿತ ಪ್ರಣಾಳಿಕೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ