‘ನಿಮ್ಮ ಮೂರು ಜನ ಸಿಎಂ ಏನು ಮಾಡಿದ್ದಾರೆ’?

M.B.patil Questioned pm modi

08-05-2018

ವಿಜಯಪುರ: ಜಲಸಂಪನ್ಮೂಲ ಸಚಿವ ಸಚಿವ ಎಂ.ಬಿ ಪಾಟೀಲ ಸ್ವಕ್ಷೇತ್ರ ಬಬಲೇಶ್ವರ ಸಾರವಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಹಿನ್ನೆಲೆ, ಟ್ಟೀಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಸ್ವಾಗತ ಕೋರಿದ್ದಾರೆ. ಪ್ರಧಾನ ಮಂತ್ರಿಗಳಿಗೆ ಹಾರ್ಧಿಕ ಸುಸ್ವಾಗತ. ನಮ್ಮ ಸರ್ಕಾರ 3500ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸಿದೆ. ಲಕ್ಷಾಂತರ ಕೃಷಿ ಹೊಂಡಗಳನ್ನು ನಿರ್ಮಿಸಿದೆ, ಮಹಿಳೆಯರಿಗೆ ಸರ್ಕಾರಿ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣ ನೀಡುತ್ತಿದೆ. ಬಸವಣ್ಣನ ಅನುಯಾಯಿಗಳನ್ನು ಒಗ್ಗೂಡಿಸಿದೆ. ನಿಮ್ಮ ಮೂರು ಜನ ಸಿಎಂ ಏನು ಮಾಡಿದ್ದಾರೆ? ಎಂದು ಪ್ರಧಾನಿಯವರನ್ನು ಪ್ರಶ್ನಿಸಿದ್ದಾರೆ. ಕೊನೆಯಲ್ಲಿ ಬರಮುಕ್ತ ಜಿಲ್ಲೆ ಶರಣರ ಬೀಡು-ಬಸವ ಜನ್ಮ ಭೂಮಿಗೆ ಸರ್ವರಿಗೂ ಸ್ವಾಗತ ಕೋರಿ ತಮ್ಮ ಭಾವಚಿತ್ರ ಹಾಕಿ ಟ್ವೀಟ್ ಮಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

M.B.Patil Twitter ಭಾವಚಿತ್ರ ಶಿಕ್ಷಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ