ಕಾಂಗ್ರೆಸ್ ವಿರುದ್ಧ ನಟಿ ಶೃತಿ ಆರೋಪ

Actress Shruthi allegation against Congress

07-05-2018

ಮಡಿಕೇರಿ: ಸೋಮವಾರಪೇಟೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಚಿತ್ರನಟಿ ಶೃತಿ, ಯಾರಿಗೆ ಬೇಕಾಗಿದೆ ರಾಜ್ಯ ಸರ್ಕಾರದ ಶಾದಿ ಭಾಗ್ಯ. ಹೆಣ್ಣುಮಕ್ಕಳಿಗೆ ಬೇಕಾಗಿರುವುದು ರಕ್ಷಣೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಅತ್ಯಾಚಾರ ಪ್ರಕರಣ ಹೆಚ್ಚಾಗಿದೆ. ಜಾತಿ ಹೆಸರಿನಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಕೊಡವರು ಅತ್ಯಂತ ದೇಶ ಭಕ್ತರು. ಸೈನಿಕರಾಗಿಲ್ಲ ಎಂದು ಯಾರೂ ಕೊರಗಬೇಕಿಲ್ಲ, ಮೇ 12ರಂದು ಬಿಜೆಪಿಗೆ ಹೋಗಿ ಮತ ಹಾಕಿದರೆ ಸಾಕು. ದೇಶ ಕಾಯುವ ಕೆಲಸವನ್ನು ಮೋದಿ ಮಾಡಲಿದ್ದಾರೆ. ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗುವ ಕೆಲಸ ಮಾಡಬೇಡಿ. ಕೊಡಗಿನಿಂದ ಅಪ್ಪಚ್ಚುರಂಜನ್ ಅವರನ್ನು ಗೆಲ್ಲಿಸುವ ಕೆಲಸವನ್ನು ಜಿಲ್ಲೆಯ ಜನತೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಹಣಕ್ಕಾಗಿ ಮತವನ್ನು ಮಾರಿಕೊಳ್ಳಬೇಡಿ ಎಂದರು.


ಸಂಬಂಧಿತ ಟ್ಯಾಗ್ಗಳು

Shruti soldier ಶಾದಿ ಭಾಗ್ಯ ಅತ್ಯಾಚಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ