ಭ್ರಷ್ಟ ಅಧಿಕಾರಿಗಳು: ಕೋಟ್ಯಾಂತರ ಅಕ್ರಮ ಆಸ್ತಿ

corrupt officers: huge illegal money, gold, property

07-05-2018

ಬೆಂಗಳೂರು: ಕಳೆದ ಮೇ.4 ರಂದು ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಅಧಿಕಾರಿಗಳ ಬಲೆಗೆ ಬಿದ್ದಿರುವ ಬಳ್ಳಾರಿಯ ಕೆನಾಲ್ ಡಿವಿಷನ್‍ನ ಕಾರ್ಯಪಾಲಕ ಅಭಿಯಂತರ  ಎಸ್.ಅಡಪ್ಪ ಸೇರಿ ನಾಲ್ವರು ಭ್ರಷ್ಟ ಅಧಿಕಾರಿಗಳ ಬಳಿ ಕೋಟ್ಯಾಂತರ ಮೌಲ್ಯದ ಅಕ್ರಮ ಆಸ್ತಿ-ಪಾಸ್ತಿ ಪತ್ತೆಯಾಗಿದೆ.

ಎಸ್.ಅಡಪ್ಪ ಬಳಿ ಬರೋಬರಿ 14ಕೆಜಿ 680 ಗ್ರಾಂ ಬೆಳ್ಳಿ 1 ಕೆಜಿ 600 ಗ್ರಾಂ ಚಿನ್ನ,ಬಳ್ಳಾರಿಯ ಸಿದ್ಧಾರ್ಥ ಕಾಲೋನಿ, ಗಾಂಧಿನಗರದಲ್ಲಿ ತಲಾ ಒಂದು ಮನೆ,ಹೊಸಪೇಟೆ, ದಾವಣಗೆರೆಯ ವಿವಿಧ ಸ್ಥಳಗಳಲ್ಲಿ 7 ನಿವೇಶನಗಳು, ಬಳ್ಳಾರಿಯಲ್ಲಿ 1 ಎಕರೆ ಜಮೀನು, 1 ಹೊಂಡಾ ಕಾರ್, 2 ದ್ವಿಚಕ್ರ ವಾಹನ,  5.71 ಲಕ್ಷ ನಗದು ಬ್ಯಾಂಕ್ ಖಾತೆಯಲ್ಲಿ 5 ಲಕ್ಷ, ಠೇವಣಿಗಳು  3.5 ಲಕ್ಷ ಠೇವಣಿ , 25.95 ಲಕ್ಷ  ಗೃಹೋಪಯೋಗಿ ವಸ್ತುಗಳು ದೊರೆತಿವೆ.

ಗುಂಡ್ಲುಪೇಟೆಯ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಅಭಿಯಂತರ ಎನ್.ರವಿಕುಮಾರ್ ಬಳಿ ಕೆಂಗೇರಿಯ ಕೆಂಚೇನಹಳ್ಳಿ ಯಲ್ಲಿ 1 ವಾಸದ ಮನೆ ಹಾಗೂ  ಮೈಸೂರಿನ ರಾ ಮಕೃಷ್ಣನಗರದಲ್ಲಿ 1 ಮನೆ, 1 ವಾಣಿಜ್ಯ ಮಳಿಗೆ, 2 ನಿವೇಶನ, ನಂಜನಗೂಡಿನಲ್ಲಿ ವಿವಿಧ ಸರ್ವೆ ನಂಬರಗಳಲ್ಲಿ 8 ಎಕರೆ 13 ಗುಂಟೆ ಕೃಷಿ ಜಮೀನು,ಚಿನ್ನ 658 ಗ್ರಾಂ, ಬೆಳ್ಳಿ 8 ಕೆಜಿ 16 ಗ್ರಾಂ, 1 ಡಸ್ಟರ್ ಕಾರ್, 3 ದ್ವಿಚಕ್ರ ವಾಹನ, 8.61 ಲಕ್ಷ  ನಗದು ಹಾಗೂ ವಿವಿಧ ಬ್ಯಾಂಕ್ ಖಾತೆಗಳಲ್ಲಿ 40 ಲಕ್ಷ, ಠೇವಣೆ ಹಾಗೂ ಪಾಲಿಸಿಗಳು 45 ಲಕ್ಷ ಮತ್ತು 14.20 ಲಕ್ಷ  ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

ಇಂಡಿಯ ಕೆಎಸ್‍ಆರ್ ಟಿಸಿ ಡಿಪೋ ಮ್ಯಾನೇಜರ್ ರಾಜಶೇಖರ್ ಸುರೇಶ್ ಗಜಕೋಶ್ ಬಳಿ ವಿಜಯಪುರದಲ್ಲಿ 1 ವಾಸದ ಮನೆ, 4 ನಿವೇಶನಗಳು, ಬಟ್ಟಕುರ್ಕಿ ಗ್ರಾಮದಲ್ಲಿ ವಿವಿಧ ಸರ್ವೆ  ನಂಬರಗಳಲ್ಲಿ 4 ಎಕರೆ 37 ಗುಂಟೆ ಕೃಷಿ ಜಮೀನು, ಚಿನ್ನ 262 ಗ್ರಾಂ, 1 ಮಾರುತಿ ಕಾರ್, 2 ದ್ವಿಚಕ್ರ ವಾಹನ ಮತ್ತು ಬ್ಯಾಂಕ್ ಖಾತೆಗಳಲ್ಲಿ ಮತ್ತು ಠೇವಣೆ  13.73 ಲಕ್ಷ ಹಾಗೂ ನಗದು 1.57 ಲಕ್ಷ  ಮತ್ತು  7.5 ಲಕ್ಷ  ಗೃಹೋಪಯೋಗಿ ವಸ್ತುಗಳನ್ನು ಹೊಂದಿರುವುದು ಕಂಡುಬಂದಿದೆ.

ಕೋಲಾರದ ಸಬ್ ರಿಜಿಸ್ಟ್ರಾರ್ ಕಚೇರಿಯ ದ್ವೀತಿಯ ದರ್ಜೆ ಸಹಾಯಕ ಅಶ್ವಥಪ್ಪ ಬಳಿ ಕೋಲಾರದಲ್ಲಿ 1 ವಾಸದ ಮನೆ ಹಾಗೂ ಬಂಗಾರಪೇಟೆ ತಾಲ್ಲೂಕಿನಲ್ಲಿ 1 ವಾಸದ ಮನೆ, 16 ಎಕರೆ 37 ಗುಂಟೆ ಕೃಷಿ ಜಮೀನು, ಚಿನ್ನ 166 ಗ್ರಾಂ, ಬೆಳ್ಳಿ 380 ಗ್ರಾಂ, 1 ದ್ವಿಚಕ್ರ ವಾಹನ,  ನಗದು 49 ಸಾವಿರ, ಬ್ಯಾಂಕ್ ಖಾತೆಗಳಲ್ಲಿ ಮತ್ತು ಠೇವಣಿಗಳು 1.87 ಲಕ್ಷ ಮತ್ತು 3.86 ಲಕ್ಷ  ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದೆ ಎಂದು ಎಸಿಬಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆಲೋಕ್ ಮೋಹನ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ACB illegal ಹೆಚ್ಚುವರಿ ಮಹಾನಿರ್ದೇಶಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ