‘ಕಾಂಗ್ರೆಸ್ ನಾಯಕರಿಗೆ ವಿಶ್ವಾಸದ ಕೊರತೆ’- ಶೋಭಾ07-05-2018

ಬೆಂಗಳೂರು: ಕಾಂಗ್ರೆಸ್ ನಾಯಕರಿಗೆ ಅಧಿಕಾರಕ್ಕೆ ಬರುವ ವಿಶ್ವಾಸದ ಕೊರತೆ ಹಾಗೂ ಸ್ವತಃ ಗೆಲ್ಲುತ್ತೇವೆ ಎನ್ನುವ ಬಗ್ಗೆ ಅನುಮಾನ ಇರುವ ಕಾರಣ ಎಲ್ಲರೂ ರಾಜ್ಯ ಪ್ರವಾಸ ಬಿಟ್ಟು ಅವರವರ ಕ್ಷೇತ್ರಕ್ಕೆ ಸೀಮಿತವಾಗಿದ್ದಾರೆ. ಇದು 'ಕೈ' ನಾಯಕರ ಹತಾಶೆಗೆ ನಿದರ್ಶನವಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಪ್ರೆಸ್ ಕ್ಲಬ್‍ನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದು ಸರ್ಕಾರಕ್ಕೆ ಅಭಿವೃದ್ಧಿ ಆಧಾರದಲ್ಲಿ ಗೆಲ್ಲುವ ವಿಶ್ವಾಸವಿಲ್ಲ. ಆ ಶಕ್ತಿ, ತಾಕತ್ತು ಉಳಿಸಿಕೊಂಡಿಲ್ಲ. ಹಾಗಾಗಿ ಬರೀ ಟೀಕೆಯಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ವಿಶ್ವಾಸದ ಕೊರತೆ ಇದೆ. ಗೆಲ್ಲುವ ಅನಮಾನ ಕಾಡಿತ್ತಿದೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಡಿ.ಕೆ.ಶಿವಕುಮಾರ್ ಸೇರಿ ನಾಯಕರು ಅವರವರ ಕ್ಷೇತ್ರಕ್ಕೆ ಸೀಮಿತರಾಗಿದ್ದಾರೆ. ರಾಜ್ಯ ಪ್ರವಾಸ ಮಾಡುತ್ತಿಲ್ಲ. ಕೇವಲ ಸಿಎಂ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಮಾತ್ರ ಪ್ರವಾಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಸಿಎಂ ಸಿದ್ದರಾಮಯ್ಯಗೆ ಚಾಮುಂಡೇಶ್ವರಿಯಲ್ಲಿ ಗೆಲ್ಲುವ ವಿಶ್ವಾಸ ಇಲ್ಲ. ಅಲ್ಲಿನ ಗೆಲುವು ಕಬ್ಬಿಣದ ಕಡಲೆ ಎಂದು ತಿಳಿದು ಮತ್ತೆ ಬಾದಾಮಿ ಕಡೆ ಮುಖ ಮಾಡಿದರು. ಬಾದಾಮಿಯಿಂದ ಮತ್ಯಾವ ಕ್ಷೇತ್ರ ಎನ್ನುವ ಮಾತು ಕೇಳಿತ್ತು. ಆದರೆ ಏಕೋ ರದ್ದಾಯಿತು. ಕಳೆದ ಐದು ವರ್ಷ ಏಕ ಚಕ್ರಾಧಿಪತ್ಯ ನಡೆಸಿದ, ಸರ್ವಾಧಿಕಾರಿಯಾಗಿ ವರ್ತಿಸಿದ ಹಿರಿಯರ ಕಡೆಗಣಿಸಿ ಮಹಾರಾಜ ಎಂದು ಬಿಂಬಿಸಿಕೊಂಡ ಸಿಎಂ ಸಿದ್ದರಾಮಯ್ಯಗೆ ಎರಡು ಕ್ಷೇತ್ರದಲ್ಲಿ ನಿಲ್ಲುವ ದುಃಸ್ಥಿತಿ ಏಕೆ ಬಂತು ಎಂದು ಪ್ರಶ್ನಿಸಿದರು.

ಈ ರೀತಿ ಜಾತಿ ಜಾತಿ ಒಡೆಯುವ ಧರ್ಮಗಳ ನಡುವೆ ಸಂಘರ್ಷ ತಂದು ಉಡಾಫೆಯಿಂದ ನಡೆದುಕೊಂಡ ದುರಹಂಕಾರದ ವರ್ತನೆ ಮಾಡಿದ ಮುಖ್ಯಮಂತ್ರಿಯನ್ನು ಕಂಡಿಲ್ಲ. ಕಾಂಗ್ರೆಸ್‍ಗಿಂತ ಹೆಚ್ಚು ಸಿಟ್ಟು ಜನಕ್ಕೆ ಸಿಎಂ ವಿರುದ್ಧ ಇದೆ. ಹಿರಿಯರ ಮೌನ, ಹತಾಶೆ, ಅಸಹಾಯಕತನ ಕಾಂಗ್ರೆಸ್ ಪಕ್ಷವನ್ನು ಇಂದು ಈ ಪರಿಸ್ಥಿತಿಗೆ ತಂದು ನಿಲ್ಲಿಸಿದೆ ಎಂದರು.

138 ಸ್ಥಾನ ಗೆಲ್ಲುವುದಾಗಿ ಸಿಎಂ ಹೇಳಿಕೆ ನೀಡಿದ್ದಾರೆ. ಆದರೆ ಕಾಂಗ್ರೆಸ್ ನ ಬೇರೆ ಯಾವ ನಾಯಕರೂ ಇದನ್ನು ಹೇಳುತ್ತಿಲ್ಲ. ಬೇರೆಯವರು ರಾಜ್ಯದ ಪ್ರವಾಸ ಮಾಡುತ್ತಿಲ್ಲ. ನರೇಂದ್ರ ಮೋದಿ, ಅಮಿತ್ ಷಾ, ಯಡಿಯೂರಪ್ಪ ವಿರುದ್ಧ ಹಗುರ ಮಾತಾಡುತ್ತಿರುವುದು ಸಿಎಂ ಸಿದ್ದರಾಮಯ್ಯ ಅವರ ಹತಾಶೆ ತೋರಿಸುತ್ತಿದೆ ಎಂದರು.

120 ಕ್ಷೇತ್ರಗಳಲ್ಲಿ ಯಡಿಯೂರಪ್ಪ ಪ್ರವಾಸ ಮಾಡುತ್ತಿದ್ದಾರೆ. ಆದರೆ 224 ಕ್ಷೇತ್ರಕ್ಕೂ ಅವರ ಬರಬೇಕು ಎಂದು ಬೇಡಿಕೆ ಇದೆ. ಒಬ್ಬ ವ್ಯಕ್ತಿ 120ಕ್ಕೂ ಹೆಚ್ಚು ಕ್ಷೇತ್ರಕ್ಕೆ ಚುನಾವಣೆ ವೇಳೆ ಹೋಗುವುದು ಅಸಾಧ್ಯ. ಆದರೂ ಯಡಿಯೂರಪ್ಪ ಪ್ರವಾಸ ಮಾಡಿತ್ತಿದ್ದಾರೆ. ಬಿಎಸ್ವೈ ಹೋಗದ ಕಡೆ ಬೇರೆ ನಾಯಕರನ್ನು ಕಳುಹಿಸಲಾಗುತ್ತಿದೆ. ಅಮಿತ್ ಷಾ ಪ್ರವಾಸ 30 ಕಡೆ, ಮೋದಿ ಪ್ರವಾಸ ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳಲಾಗಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

shobha karandlaje press club ಅಮಿತ್ ಷಾ ಹತಾಶೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ