ಅನೈತಿಕ ಸಂಬಂಧ ಪತ್ನಿ ಕೊಲೆ!

wife murdered by his own husband!

07-05-2018

ಬೆಂಗಳೂರು: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿಯನ್ನು ಮಕ್ಕಳ ಎದುರೇ ಹಲ್ಲೆ ನಡೆಸಿ ಕೊಲೆ ಮಾಡಿ ಅಪಘಾತವೆಂದು ಬಿಂಬಿಸಲು ಪ್ರಯತ್ನಿಸಿದ ಪತಿಯನ್ನು ಮಕ್ಕಳು ನೀಡಿದ ಮಾಹಿತಿ ಆಧರಿಸಿ ಬೆಂಗಳೂರು ಗ್ರಾಮಾಂತರ ಪೊಲೀಸರ ಅತಿಥಿಯಾಗಿದ್ದಾನೆ. ದರ್ಗಾಜೋಗಹಳ್ಳಿಯ ಜಯಮ್ಮ (35)ನ ಮೇಲೆ ಹಲ್ಲೆ ನಡೆಸಿ ಗೋಡೆಗೆ ತಲೆಗುದ್ದಿ ಕೊಲೆಗೈದ  ಆರೋಪಿ ಪತಿ ಮಂಜುನಾಥನನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.

ನಗರದಲ್ಲಿ ಮಂಜುನಾಥ ಪೈಂಟಿಂಗ್ ಕೆಲಸ ಮಾಡುತ್ತಿದ್ದರೆ ಪತ್ನಿ ಜಯಮ್ಮ ಗಾರ್ಮೆಂಟ್ಸ್ ಕೆಲಸ ಮಾಡುತ್ತ ಮಕ್ಕಳನ್ನು ಸಾಕುತ್ತಿದ್ದಳು, ಕಳೆದ ಮೇ 5 ರಂದು ರಾತ್ರಿ .ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಕುಡಿದು ಮನೆಗೆ ಬಂದ ಪತಿ ಜಗಳ ತೆಗೆದು ಕೋಪದ ಭರದಲ್ಲಿ ಪತ್ನಿ ಮೇಲೆ ಹಲ್ಲೆ ನಡೆಸಿ ತಲೆಯನ್ನು ಗೋಡೆಗೆ ಗುದ್ದಿದ್ದಾನೆ. ಮರುದಿನ ಬೆಳಿಗ್ಗೆ ಪತ್ನಿ ತೀವ್ರವಾಗಿ ಅಸ್ವಸ್ಥಗೊಂಡಿದ್ದನ್ನು ಕಂಡ ಪತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆಗೆ ಸ್ಪಂದಿಸದೆ ಜಯಮ್ಮ ಸಾವಿಗೀಡಾಗಿದ್ದಾಳೆ.

ಆಸ್ಪತ್ರೆಯಲ್ಲಿ ಬೈಕ್‍ನಿಂದ ಬಿದ್ದು ತಲೆಗೆ ಏಟಾಗಿತ್ತು ಎಂದು ಬಿಂಬಿಸಲು ಪತಿ ಪ್ರಯತ್ನಿಸಿದಾದರೂ ಮನೆಯಲ್ಲಿದ್ದ ಮಕ್ಕಳು ತಂದೆ ಹಲ್ಲೆ ನಡೆಸಿದ್ದನ್ನು ಹೇಳಿದ್ದರು. ಪೊಲೀಸರು ಮಂಜುನಾಥ್‍ನನ್ನು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.


ಸಂಬಂಧಿತ ಟ್ಯಾಗ್ಗಳು

Murder Accident ಕುಡಿದು ಅಸ್ವಸ್ಥ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ