ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಕಟು ಟೀಕೆ

Rahul Gandhi

07-05-2018

ಬೆಂಗಳೂರು: ರಾಜ್ಯದ ಸಂಪತ್ತನ್ನು ಲೂಟಿ ಮಾಡಿದ ಯಡಿಯೂರಪ್ಪ ಪರ ಮೋದಿ ಪ್ರಚಾರ ಮಾಡುತ್ತಿದ್ದಾರೆ. ಅವರನ್ನು ಮುಖ್ಯಮಂತ್ರಿ ಮಾಡಲು ಹೋಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಕೋಲಾರದಲ್ಲಿ ಕಾಂಗ್ರೆಸ್ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್  ಗಾಂಧಿ, ಪ್ರಪಂಚದಲ್ಲಿ ಪೆಟ್ರೋಲಿಯಂ ಬೆಲೆ ಕುಸಿದಿದೆ. ಆದರೆ, ಭಾರತದಲ್ಲಿ ಅವುಗಳ ಬೆಲೆ ಹೆಚ್ಚಾಗಿದ್ದು ಆ ಹಣ ಏನ್ ಮಾಡಿದ್ದಿರೀ. ಅದಕ್ಕೆ ಉತ್ತರ ಕೊಡಿ. ಬಡವರ ಹಣವನ್ನು ದೊಡ್ಡ ಉದ್ಯಮಿಗಳಿಗೆ ನೀಡುತ್ತಿದ್ದೀರಿ. ಇದನ್ನು ಜಿಎಸ್ಟಿ ವ್ಯಾಪ್ತಿಯಲ್ಲಿ ಯಾಕೆ ತರಲಿಲ್ಲ ಎಂದು ಪ್ರಶ್ನಿಸಿದರು.

ನೀರವ್ ಮೋದಿ, ಲಲಿತ್ ಮೋದಿ ಜೇಬು ತುಂಬಿಸಲು ನೀವು ಮಾಡುತ್ತಿರುವ ತಂತ್ರ ಎಂದು ಜನರಿಗೆ ಹೇಳಿ. ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆ ನನ್ನ ನೋಡಿ ಮತಹಾಕಿ ಅನ್ನುತ್ತಿದ್ದೀರಿ. ಆದರೆ, ರಾಜ್ಯದ ಜನರಿಗೆ ಏನು ಮಾಡುತ್ತೀರಿ ಹೇಳಿ. ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡಿದ್ದೀರಿ. ರೈತರ ಸಾಲ ಮನ್ನಾ ಮಾಡಿಲ್ಲವೇಕೆ. ಇದನ್ನು ಜನ ನೋಡುತ್ತಿದ್ದಾರೆ.

ದೇಶದಲ್ಲಿ ದಲಿತರಿಗೆ ನೀಡಿರುವ ಅನುದಾನ ಕರ್ನಾಟಕದಲ್ಲಿ ಅದಕ್ಕೆ ಅರ್ಧದಷ್ಟು ಅನುದಾನ ನೀಡಿದ್ದೇವೆ. ಗುಜರಾತ್ ನಲ್ಲಿ ಎಲ್ಲಾ ವಿದ್ಯಾಸಂಸ್ಥೆಗಳನ್ನು ಖಾಸಗೀಕರಣ ಮಾಡಿದ್ದೀರಿ. ಆದರೆ ರಾಜ್ಯದಲ್ಲಿ ಉಚಿತ ಶಿಕ್ಷಣ, ಆಹಾರ ವ್ಯವಸ್ಥೆ ಮಾಡಿದ್ದೇವೆ. ನಾಲ್ಕು ವರ್ಷದಿಂದ ಮೋದಿ ದೇಶದಲ್ಲಿ ಮಾಡಿದ್ದೇನೆ. ನಿಮ್ಮ ಆಡಳಿತದಲ್ಲಿ ರಾಜ್ಯವನ್ನು ಯಾವ ದುಸ್ಥಿತಿಗೆ ತಂದಿದ್ದೀರಿ. ನಿಮ್ಮ ಮುಖ್ಯಮಂತ್ರಿಗೆ ಅರ್ಹತೆ ಏನಿದೆ. ಎಷ್ಟು ಸಲ ಜೈಲಿಗೆ ಹೋಗಿದ್ದಾರೆ.

ಚುನಾವಣೆಯ ಸಂಘರ್ಷ ಕಾಂಗ್ರೆಸ್ ಹಾಗೂ ಸಂಘ ಪರಿವಾರಗಳದ್ದು. ಜೆಡಿಎಸ್ ನಾಯಕರು ಯಾರ ಪರ ಇದ್ದಾರೆ. ಬಿಜೆಪಿ ಜೊತೆ ಇದ್ದಾರಾ ಸೆಕ್ಯೂಲರ್ ಪರ ಇದ್ದಾರಾ. ಜೆಡಿಎಸ್ ನ ಸಿಎಂ ಅಭ್ಯರ್ಥಿ ಯಡಿಯೂರಪ್ಪನಾ.

ಮೋದಿ, ಬಸವಣ್ಣ ಮೂರ್ತಿಗೂ ಕೈ ಮುಗಿಯುತ್ತಾರೆ ಮತ್ತೊಂದಡೆ ಅಂಬೇಡ್ಕರ್ ಗೆ ಕೈ ಮುಗಿಯುತ್ತಾರೆ. ಬಸವಣ್ಣ ನುಡಿದಂತೆ ನಡೆದಿದ್ದಾರೆ. ಅವರಂತೆ ನೀವು ಇದ್ದೀರಾ? ಅಂಬೇಡ್ಕರ್ ಆಶಯದಂತೆ ದಲಿತರ ಮೇಲೆ ಹಲ್ಲೆ ನಡೆದಾಗ ನೀವು ಏನು ಮಾಡುತ್ತಿದ್ದೀರಿ. ಸಂವಿಧಾನ ಬದಲಿಸುವ ಬಗ್ಗೆ ಮಾತನಾಡುವ ಬಿಜೆಪಿ ಎಂಪಿಗಳಿಗೆ ಏನು ಉತ್ತರ ಕೊಟ್ಟಿದ್ದೀರಿ. ನಾವು ಸಂವಿಧಾನ ರಕ್ಷಣೆಗೆ ಬದ್ದವಾಗಿದ್ದೇವೆ, ನಾವು ಬಲಿಷ್ಠವಾಗಿಯೇ ಇದ್ದೇವೆಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.


ಸಂಬಂಧಿತ ಟ್ಯಾಗ್ಗಳು

Rahul gandhi secular ಸಂವಿಧಾನ ಬಲಿಷ್ಠ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ