ಪತಿ ಮುಂದೆಯೇ ಪತ್ನಿಗೆ ಲೈಂಗಿಕ ಕಿರುಕುಳ

sexual harassment on wife, in front of husband

07-05-2018

ಬೆಂಗಳೂರು: ಪತಿಯ ಮುಂದೆಯೇ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ ಮಹಾರಾಷ್ಟ ಮೂಲದ ಯುವಕನನ್ನು ಹಿಡಿದ ಸಾರ್ವಜನಿಕರು ಧರ್ಮದೇಟು ನೀಡಿ ಜೆ.ಪಿ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಜೆಪಿನಗರದ ದಂಪತಿ ನಿನ್ನೆ ರಾತ್ರಿ ಹೋಟೆಲ್ ನಲ್ಲಿ ಊಟ ಮುಗಿಸಿ ಬೈಕಿನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ, ಹಿಂದಿನಿಂದ ಬೈಕಿನಲ್ಲಿ ಬಂದ ಯುವಕನೊಬ್ಬ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಪತಿಯ ಎದುರಲ್ಲೇ ಮಹಿಳೆಯ ಟೀ ಶರ್ಟ್ ಎಳೆದು ಅಸಭ್ಯವಾಗಿ ವರ್ತಿಸಿದ್ದಾನೆ. ಯುವಕನ ವರ್ತನೆಯಿಂದ ಬೆದರಿದ ಮಹಿಳೆ ಕಿರುಚಿಕೊಂಡಿದ್ದಾರೆ. ಮಹಿಳೆಯ ಚಿರಾಟ ಕೇಳಿದ ಸಾರ್ವಜನಿಕರು ಬಂದು ಲೈಂಗಿಕ ಕಿರುಕುಳ ನೀಡಿದ ಯುವಕನನ್ನು ಥಳಿಸಿ ಜೆ.ಪಿ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Harassment public ಸಾರ್ವಜನಿಕರು ಟೀ ಶರ್ಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ