ಎಸ್ಸೆಸ್ಸೆಲ್ಸಿಯಲ್ಲೂ ಬಾಲಕಿಯರದೇ ಮೇಲುಗೈ

karnataka: sslc result out

07-05-2018

ಬೆಂಗಳೂರು: 2018ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಪ್ರೌಢಶಾಲಾ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ. ಇದೇ ಮೊದಲ ಬಾರಿಗೆ ಪಾಸಾದ ವಿದ್ಯಾರ್ಥಿಗಳ ಪೋಷಕರು ಹಾಗೂ ವಿದ್ಯಾರ್ಥಿಗಳ ಮೊಬೈಲ್ ಗೆ ಎಸ್.ಎಂ.ಎಸ್ ಮೂಲಕ ಫಲಿತಾಂಶ ದೊರೆತಿದೆ. 6 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಎಸ್ ಎಂ ಎಸ್ ಕಳಿಸಲಾಗುತ್ತಿದೆ. ಅಲ್ಲದೇ www.Sslc.kar.nic.in / www.karresults.nic.in ವೆಬ್ ಸೈಟ್ ಗಳಲ್ಲಿ ಫಲಿತಾಂಶ ಲಭ್ಯವಿದೆ.

ನಾಳೆ ಮಧ್ಯಾಹ್ನ 12 ಗಂಟೆ ವೇಳೆಗೆ ರಾಜ್ಯದ ಎಲ್ಲಾ ಪ್ರೌಢಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ಹೇಳಿದರು. ಈ ಬಾರಿ 4,56,103 ಬಾಲಕರು ಮತ್ತು 3,98,321 ಬಾಲಕಿಯರು ಸೇರಿದಂತೆ ಒಟ್ಟು 8,54,424 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ವಿವರ ನೀಡಿದರು.

ಈ ಬಾರಿ ಆನ್ ಲೈನ್ ನಲ್ಲಿ ಫಲಿತಾಂಶ ಪಡೆದುಕೊಳ್ಳಬಹುದು, ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಮುಖ್ಯೋಪಾಧ್ಯಾಯರ ಮೊಬೈಲ್ ಗೆ ಲಾಗಿನ್ ಐಡಿ, ಪಾಸ್ ವರ್ಡ್ ಬರಲಿದೆ. ಲಾಗಿನ್ ಆಗಿ ಎಲ್ಲಾ ವಿದ್ಯಾರ್ಥಿಗಳ ಫಲಿತಾಂಶ ಪಡೆಯಲು ಅವಕಾಶವಿದೆ. ಈ ಬಾರಿ ಶೇಕಡಾ 71.93ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷ ಶೇಕಡಾ 67.87. ಕಳೆದ ಬಾರಿಗಿಂತ ಶೇಕಡಾ 4.06 ಹೆಚ್ಚಾಗಿದೆ. ಸರ್ಕಾರಿ ಶಾಲೆಗಳಲ್ಲಿ ಶೇಕಡಾ 75.12 ಫಲಿತಾಂಶ. ಹೆಣ್ಣುಮಕ್ಕಳು ಶೇಕಡಾ 78.01 ಉತ್ತೀರ್ಣರಾಗಿದ್ದರೆ, ಬಾಲಕರ ಶೇಕಡಾ 74.25 ಒಟ್ಟು ಫಲಿತಾಂಶ. ಈ ಬಾರಿಯೂ ಫಲಿತಾಂಶದಲ್ಲಿ ಹೆಣ್ಣು ಮಕ್ಕಳು ಮೇಲುಗೈ ಸಾಧಿಸಿದ್ದಾರೆ.

ಹೆಚ್ಚುವರಿ ಫಲಿತಾಂಶ ಪಡೆದ ಜಿಲ್ಲೆಗಳು ಮೊದಲ ಜಿಲ್ಲೆ ಉಡುಪಿ 88.18, ಎರಡನೇ ಜಿಲ್ಲೆ ಉತ್ತರ ಕನ್ನಡ 88.12,  ಮೂರನೇ ಸ್ಥಾನದಲ್ಲಿ ಚಿಕ್ಕೋಡಿ 87.01. ಕಡಿಮೆ ಫಲಿತಾಂಶ ದಾಖಲಿಸಿದ ಜಿಲ್ಲೆಗಳು ಯಾದಗಿರಿ ಶೇಕಡಾ 35.5.


ಸಂಬಂಧಿತ ಟ್ಯಾಗ್ಗಳು

SSLC Result ಮೇಲುಗೈ ಫಲಿತಾಂಶ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ