ಮೋದಿ ಹೇಳಿಕೆಗೆ ರೈ ಆಕ್ರೋಶ

prakash Rai v/s Narendra Modi

07-05-2018

ಗದಗ: ಬಿಜೆಪಿ ವಿರೋಧ ಮಾಡುವರು ಮುಧೋಳ ನಾಯಿ ನೋಡಿ ಕಲಿಯಿರಿ ಎಂಬ ಮೋದಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಹುಭಾಷಾ ನಟ ಪ್ರಕಾಶ್ ರೈ, ಮೋದಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.

ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ರೈ, ಮೋದಿ ಮುಧೋಳ ನಾಯಿ ಬಗ್ಗೆ ಮಾತನಾಡುತ್ತಾರೆ. ಬಿಜೆಪಿ ವಿರೋಧಿಗಳು ಮುಧೋಳ ನಾಯಿ ನೋಡಿ ಕಲಿಬೇಕು ಅಂತಾರೆ. ಸೈನ್ಯದಲ್ಲಿ ಮುಧೋಳ ನಾಯಿಗೆ ಕೆಲಸ ಕೊಡುತ್ತಾರಂತೆ. ರೀ ಸ್ವಾಮಿ ರಾಜ್ಯದ ಚುನಾವಣೆಯಲ್ಲಿ ನಾಯಿ ಮತ ಹಾಕಲ್ಲ. ಜನ ಮತ ಹಾಕುತ್ತಾರೆ ಎಂದು ಕಿಡಿ ಕಾರಿದರು. ಇಲ್ಲಿನ ನಾಯಿಗಳು ಜನರ ಪ್ರೀತಿ, ಊಟಕ್ಕಾಗಿ ಮನೆ ಕಾಯುತ್ತವೆ. ಮತ ಹಾಕೋದು ರೈತರು, ಯುವಕರು ನಮ್ಮ ಗತಿ ನಾಯಿ ಪಾಡು ಆಗಲು ಬಿಡಲ್ಲ ಎಂದು  ಮೋದಿ ವಿರುದ್ಧ ಆಕ್ರೋಶಗೊಂಡರು.

ಪ್ರಧಾನಿ ಸ್ಥಾನಕ್ಕೆ ಗೌರವ ಕೊಡಿ. ನಾಯಿಗಿಂತ ಕಡೆಯಾದೆವಾ ನಾವು, ಪ್ರಧಾನಿ ಮೋದಿ ಅಭಿವೃದ್ಧಿ ಅನ್ನೋದು ಬರೀ ಸುಳ್ಳು, ಮೂರು ವರ್ಷ ಏನು ಮಾಡಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. ಸಂವಿಧಾನ ಬದಲಾವಣೆ ಹೇಳಿಕೆ ವಿಚಾರದ ಕುರಿತು, ರಾಕ್ಷಸರನ್ನು ಆಯ್ಕೆ ಮಾಡದಿದ್ದರೆ ಈ‌ ಸಮಸ್ಯೆ ಆಗುತ್ತಿರಲಿಲ್ಲ ಅಂತ ಸಚಿವ ಅನಂತಕುಮಾರ ಹೆಗಡೆ ವಿರುದ್ಧ ಕೆಂಡಕಾರಿದರು.

ಪ್ರಧಾನಿ ಯವರು ಮಹದಾಯಿ ವಿಚಾರದ ಬಗ್ಗೆ ನೀಡಿರುವ ಹೇಳಿಕೆ ಕುರಿತು, ಮತ ಹಾಕಿ ನೀರು ಕೊಡುತ್ತೇವೆ ಎಂದು ಪ್ರಧಾನಿ ಬ್ಲಾಕ್ ಮೇಲ್ ಮಾಡುತ್ತೀರಾ? ಮೂರು ವರ್ಷದಿಂದ ರೈತರು ಹೋರಾಟ ಮಾಡಿದ್ದಾರೆ ಒಂದು ಬಾರಿಯೂ ಮಹದಾಯಿ ಬಗ್ಗೆ ಮಾತನಾಡಿಲ್ಲ. ಸಾಕಷ್ಟು ಬಾರಿ ರಾಜ್ಯಕ್ಕೆ ಬಂದರೂ ಮಾತನಾಡಿಲ್ಲ. ಯಾಕೆ ಮಾತನಾಡಿಲ್ಲ ಎಂದು ಪ್ರಶ್ನಿಸಿದ್ದಾರೆ. ನಾಲ್ಕು ಪಕ್ಷೇತರ ಶಾಸಕರ ಪಡೆದು ಗೋವಾದಲ್ಲಿ ಬಿಜೆಪಿ ಸರ್ಕಾರ ರಚಿಸಿದೆ. ರಾಜ್ಯಕ್ಕೆ ನೀರು ಕೊಟ್ಟರೆ ಗೋವಾ ಸರ್ಕಾರ ಬಿಳುತ್ತದೆ ಎಂದು ಸೋನಿಯಾ ವಿರುದ್ಧ ಮಾತನಾಡುತ್ತಿದ್ದಾರೆ ಎಂದರು.


ಸಂಬಂಧಿತ ಟ್ಯಾಗ್ಗಳು

prakash Rai Narendra Modi ಮುಧೋಳ ನಾಯಿ ಅಭಿವೃದ್ಧಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ