ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ನಾಟಕ ಮಂಡಳಿ

Kannada News

23-05-2017

ಗದಗ:- ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ನಾಟಕ ಮಂಡಳಿ.ಸಿಎಂ ಸಿದ್ದರಾಮಯ್ಯ ನಾಟಕ ಮಡಳಿಯ ನಾಯಕ ಎಂದು ಮಾಜಿ ಸಚಿವ ಗೋವಿಂಗ ಕಾರಜೋಳ ರಾಜ್ಯ ಸರ್ಕಾರದ ವಿರುದ್ಧ ಲೇವಡಿ ಮಾಡಿದ್ದಾರೆ. ಗದಗ ಜಿಲ್ಲೆಯ ಶಿಗ್ಗಿ ಗ್ರಾಮದಲ್ಲಿ ಮಾತನಾಡಿದ ಆವರು, ಹಟ್ಟಿ, ಹಾಡಿಯಲ್ಲಿ ವಾಸ್ತವ್ಯ ಮಾಡುವ ‌ಮೂಲಕ ಸಮಾಜ ಕಲ್ಯಾಣ ಸಚಿವ ಆಂಜನೇಯ ನಾಟಕ ಮಾಡುತ್ತಿದ್ದಾರೆ, ಎಂದು ಸಚಿವ ಆಂಜನೇಯ ವಿರುದ್ಧವು  ವಾಗ್ದಾಳಿ ನಡೆಸಿದರು. ಸರ್ಕಾರ ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಮಾಡುತ್ತಿದೆ.ಕಾವೇರಿ ಜಲಾನಯನ ಪ್ರದೇಶದ ರೈತರಿಗೆ ನೀಡಿದ ಪರಿಹಾರ. ಕಬಿನಿ, ಹೇಮಾವತಿ, ಹಾರಂಗಿ ಅಚ್ಚುಕಟ್ಟು ಪ್ರದೇಶದ ರೈತರಿಗೂ ಸಹ ಬೆಳೆ ಪರಿಹಾರ ನೀಡಿದ್ದಾರೆ. ಆದರೆ ಉತ್ತರ ಕರ್ನಾಟಕದ ಕೃಷ್ಣಾ,, ಮಲಪ್ರಭಾ, ಘಟಪ್ರಭಾ ಜಲಾನಯನ ಪ್ರದೇಶದ ರೈತರಿಗೆ ಪರಿಹಾರ ಏಕೆ ಪರಿಹಾರ ನೀಡಿಲ್ಲ ಎಂದು ಪ್ರೆಶ್ನಿಸಿದ್ದಾರೆ. ಸರ್ಕಾರ ಈ ಕೂಡಲೇ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ