ಬಾದಾಮಿ: ವಿವಿಧ ಸಮುದಾಯದವರೊಡನೆ ಸಿಎಂ ಸಭೆ

Badami: CM meeting with different communities

05-05-2018

ಬಾಗಲಕೋಟೆ: ಬಾದಾಮಿ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿರುವ ಸಿಎಂ ಸಿದ್ದರಾಮಯ್ಯ ಇಂದು ವಿವಿಧ ಸಮುದಾಯದವರೊಡನೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಭಾಷಣ ಮಾಡಿದ ಸಿಎಂ  ಬದಾಮಿ ಕ್ಷೇತ್ರದ ಎಲ್ಲಾ ಮುಖಂಡರು ಚಿಮ್ಮನಕಟ್ಟಿ, ಎಸ್.ಆರ್.ಪಾಟೀಲ್, ತಿಮ್ಮಾಪೂರ್, ಹೊಸಗೌಡರು, ಎಸ್.ಆರ್.ಪಾಟೀಲ್, ಎಲ್ಲಾ ಸಮುದಾಯದವರು ಬಂದಿದ್ದಾರೆ. ಈ ಭಾಗದ ಮುಖಂಡರು ಬದಾಮಿಯಿಂದ ಸ್ಪರ್ಧೆ ಮಾಡಲು ಒತ್ತಾಯ ಮಾಡಿದ್ದರು. ಈ ಭಾಗದ ಸ್ನೇಹಿತರ ಒತ್ತಡಕ್ಕೆ ಮಣಿದು ಸ್ಪರ್ಧೆ ಮಾಡುತ್ತಿದ್ದೇನೆ. ನಾನು ಒಂದು ರೀತಿ 224 ಕ್ಷೇತ್ರದಲ್ಲಿಯೂ ನಾನೇ ಅಭ್ಯರ್ಥಿ ಇದ್ದಂತೆ ಎಂದರು.

ನಾವು ಒಂದು ಜಾತಿಗೆ, ಧರ್ಮಕ್ಕೆ ಸೀಮಿತವಾಗಿ ಕೆಲಸ ಮಾಡಿಲ್ಲ. ಅವಕಾಶ ವಂಚಿತರಿಗೆ ಹಲವು ಕಾರ್ಯಕ್ರಮ ಕೊಟ್ಟಿದ್ದೇವೆ. ಇಂತಹ ಕಾರ್ಯಕ್ರಮಗಳನ್ನ ಹಿಂದಿನ ಬಿಜೆಪಿ, ಜೆಡಿಎಸ್ ಪಕ್ಷದವರು ಮಾಡಿದ್ರಾ? ಇಲ್ಲ ಅಂದ ಮೇಲೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಅಲ್ವಾ? ಎಂಬ ಪ್ರಶ್ನೆ ಮುಂದಿಟ್ಟರು.

ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಹೋಗಿಲ್ಲ. ಇವತ್ತು ಸಣ್ಣ ಸಣ್ಣ ಸಮುದಾಯಕ್ಕೂ ಟಿಕೆಟ್ ಕೊಟ್ಟಿದ್ದೇವೆ. ಬಿಜೆಪಿಯವರು ಬಾಯಲ್ಲಿ ಮಾತ್ರ ಸಬ್ ಕಾ ಸಾಥ್ ಅಂತಾರೆ ಅದು ಸಬ್ ಕಾ ಸಾಥ್ ಅಲ್ಲ, ಸಬ್ ಕಾ ವಿನಾಶ್ ಎಂದು ಲೇವಡಿ ಮಾಡಿದ್ದಾರೆ. ನಾನು ಮುಖ್ಯಮಂತ್ರಿ ಆಗೋದು ನೂರಕ್ಕೆ ನೂರು ಸತ್ಯ. ಬಾದಾಮಿಯನ್ನು ಸರ್ವತೋಮುಖವಾಗಿ ಅಭಿವೃದ್ಧಿ ಮಾಡುತ್ತೇನೆ. ನಾನು ನಿಮ್ಮ ಜೊತೆ ಇದ್ದೇನೆ. ಗೆಲ್ಲಲಿ, ಅಧಿಕಾರದಲ್ಲಿ ಇರ್ಲಿ, ಇರದೇ ಇರ್ಲಿ, ನಿಮ್ಮ ಜೊತೆ ನಾನಿದ್ದೇನೆ ಎಂದು ಹೇಳಿದರು.

ಎಲ್ಲಾ ಸಮುದಾಯದ ಜಯಂತಿಗಳನ್ನ ಆಚರಿಸಿದ್ದೇವೆ. ಕುಮಾರಸ್ವಾಮಿ, ದೇವೇಗೌಡರು ಬುರುಡೆ ಹೊಡಿತಾರೆ. ಅವರ ಕೆಲಸ ಏನೂ ಅಂದರೆ ಹಿಂದೂ-ಮುಸ್ಲಿಂ ನಡುವೆ ಜಗಳ ಹಚ್ಚೋದು ಎಂದು ಟೀಕೆ ಮಾಡಿದ್ದಾರೆ. ರಾಮುಲು ಇಲ್ಲಿಗೆ ಯಾಕೆ ಬಂದರು. ಬಳ್ಳಾರಿಯಲ್ಲಿ ಗುಡ್ಡ ಲೂಟಿ ಹೊಡೆದರು, ಈಗ ಬಾದಾಮಿಯಲ್ಲಿ ಗುಡ್ಡ ಹೊಡೆಯೋಕೆ ಬಂದಿದ್ದಾರೆ ಉಷಾರ್ ಎಂದು ಮುಖಂಡರ ಸಭೆಯ ಭಾಷಣದಲ್ಲಿ ಸಿಎಂ ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

B. Sriramulu siddaramaiah ಸಮುದಾಯ ಬಳ್ಳಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ