ಕೈ ಅಭ್ಯರ್ಥಿ ವಿರುದ್ಧ ಸುಳ್ಳು ಮಾಹಿತಿ ಆರೋಪ

false information: charges against congress candidate Ramesh bandi siddegowda

05-05-2018

ಮಂಡ್ಯ: ಕಾಂಗ್ರೆಸ್ ಅಭ್ಯರ್ಥಿ ಚುನಾವಣಾ ಅಫಿಡವಿಟ್ ನಲ್ಲಿ ಸುಳ್ಳು ಮಾಹಿತಿ ನೀಡಿರುವ ಆರೋಪ ಕೇಳಿ ಬಂದಿದೆ. ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಂಡಿಸಿದ್ದೇಗೌಡ ಸುಳ್ಳು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಆರ್.ಟಿ.ಐ ಕಾರ್ಯಕರ್ತ ಕೆ.ಆರ್.ರವೀಂದ್ರ ಎಂಬುವರು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಬಂಡಿಸಿದ್ದೇಗೌಡ ತನ್ನ ಹೆಸರಲ್ಲಿರುವ ಒಂದು, ಪತ್ನಿ ಸುಮತಿ ಹೆಸರಲ್ಲಿರುವ 85 ನಿವೇಶನಗಳ ಮಾಹಿತಿ ಮುಚ್ಚಿಟ್ಟಿರುವ ಆರೋಪ ಮಾಡಿದ್ದಾರೆ. ಅಭ್ಯರ್ಥಿ ರಮೇಶ್ ಬಂಡಿಸಿದ್ದೇಗೌಡ ಹೆಸರಲ್ಲಿರುವ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ. ಪತ್ನಿ ಸುಮತಿ ಹೆಸರಲ್ಲಿ ಕಿರಂಗೂರಲ್ಲಿರುವ 85 ನಿವೇಶನಗಳ ಮಾಹಿತಿ ಮುಚ್ಚಿಟ್ಟಿರುವುದಾಗಿ ಆರೋಪಿಸಿದ್ದಾರೆ.

ಅನ್ಯಕ್ರಾಂತ ಮಂಜೂರು ಆಗಿ ನಿವೇಶನ ಮಾಡಿದ್ದರೂ ಕೃಷಿ ಭೂಮಿಯಾಗಿ ತೋರಿಸಿದ್ದಾರೆ. 85 ನಿವೇಶನಗಳ ಲೇಔಟ್ ನಿರ್ಮಾಣ ಮಾಡಿದ್ದರೂ ಕೃಷಿ ಭೂಮಿಯಾಗಿ ದಾಖಲೆ ನೀಡಿದ್ದಾರೆ. ಮುಡಾದಲ್ಲಿ ನಿವೇಶನ ಪಡೆದರೂ ಘೋಷಣೆ ಮಾಡಿಕೊಂಡಿಲ್ಲ ಎಂದು ದೂರಿದ್ದಾರೆ. ಕಿರಂಗೂರಿನ ಸರ್ವೆ ನಂಬರ್ 402/2, 418/3, 418/4, 419/2, 419/3ರ ಜಮೀನು. ಮಂಡ್ಯದ ವಿವೇಕಾನಂದ ಬಡಾವಣೆಯಲ್ಲಿ ನಿವೇಶನ ಸಂಖ್ಯೆ 1061, ಇವುಗಳ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಸುಮಾರು 10 ಕೋಟಿ ರೂ. ಮೌಲ್ಯದ ನಿವೇಶನಗಳು ಎಂದು ಅಂದಾಜಿಸಲಾಗಿದೆ.


ಸಂಬಂಧಿತ ಟ್ಯಾಗ್ಗಳು

Ramesh bandisidde go RTI ಕೃಷಿ ಭೂಮಿ ನಿವೇಶನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ