ಭಾಷಣ ಅರ್ಧಕ್ಕೆ ನಿಲ್ಲಿಸಿದ ಭೀಮನಾಯ್ಕ!

05-05-2018
ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ಮತ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮನಾಯ್ಕಗೆ ಮುಜುಗರದ ಘಟನೆಯೊಂದು ನಡೆದಿದೆ. ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕಡಲಬಾಳು ಗ್ರಾಮದಲ್ಲಿ ಪ್ರಚಾರದ ಮಾಡುತ್ತಿದ್ದ ವೇಳೆ ಮೋದಿ, ಮೋದಿ ಎಂದು ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಅದಲ್ಲದೇ ಭಾಷಣ ಮಾಡುತ್ತಿದ್ದಾಗಲೂ ಮೋದಿ, ಮೋದಿ ಎಂದು ಕೂಗುವ ಮೂಲಕ ಭಾಷಣಕ್ಕೆ ಅಡ್ಡಿಪಡಿಸಿದ್ದಾರೆ. ಇದಿರಿಂದ ಭಾಷಣ ಅರ್ಧಕ್ಕೆ ಮೊಟಕುಗೊಳಿಸಿ ಭೀಮನಾಯ್ಕ ಹೊರಟು ಹೋದರು. ಅಂಕಸಮುದ್ರ ಗ್ರಾಮದಲ್ಲೂ ಸ್ಥಳೀಯರೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಭೀಮನಾಯ್ಕ ಮಾತಿನ ಚಕಮಕಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಒಂದು ಕಮೆಂಟನ್ನು ಹಾಕಿ