‘ಮಿಷನ್ 150 ಠುಸ್ ಆಗಿದೆ’-ಸಿಎಂ05-05-2018

ಶಿವಮೊಗ್ಗ: ನಟ ಸುದೀಪ್ ಬಾದಾಮಿಯಲ್ಲಿ ಬಂದು ಪ್ರಚಾರ ಮಾಡುವ ವಿಚಾರ ನನಗೆ ಗೂತ್ತಿಲ್ಲ. ಸುದೀಪ್ ಈ ಹಿಂದೆ ನಾನೇ ಬಂದು ಕ್ಯಾಂಪೇನ್ ಮಾಡುತ್ತೇನೆ ಎಂದಿದ್ದರು. ಈಗ ಅವರು ಬರುತ್ತಾರೋ ಇಲ್ವೊ ಗೂತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಸಿಎಂ, ಅಹಿಂದ, ಎಸ್ ಸಿ/ಎಸ್ ಟಿ, ಅಲ್ಪಸಂಖ್ಯಾಂತರಿಗೆ ಅನ್ಯಾಯ ಮಾಡಿದ್ದು ನಾವಲ್ಲ, ಮೋದಿ. ದೇಶದ ಪ್ರಧಾನಿಯಾದವರು ಜವಾಬ್ದಾರಿಯಿಂದ ಮಾತನಾಡಬೇಕು. ಶಿಕಾರಿಪುರದಲ್ಲಿ ಯಡಿಯೂರಪ್ಪ, ಶಿವಮೊಗ್ಗದಲ್ಲಿ ಈಶ್ವರಪ್ಪ ಸೋಲುತ್ತಾರೆ. ಬಾದಾಮಿ ಹಾಗೂ ಚಾಮುಂಡೇಶ್ವರಿ ಎರಡು ಕಡೆ ನಾನು ನೂರರಕ್ಕೆ ನೂರು ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಪ್ರಣಾಳಿಕೆಯಲ್ಲಿ ಹೊಸದು ಏನೂ ಇಲ್ಲ. ಯಡಿಯೂರಪ್ಪ ಮಾತಿಗೆ ಮೂರು ಕಾಸಿನ ಕಿಮ್ಮತ್ತು ಇಲ್ಲ. ಯಡಿಯೂರಪ್ಪ ಜೈಲಿಗೆ ಹೋಗಿ ಬಂದ ವ್ಯಕ್ತಿ ಅವರ ಮಾತನ್ನು ಯಾರು ನಂಬುತ್ತಾರೆ ಎಂದು ಲೇವಡಿ ಮಾಡಿದ್ದಾರೆ. ಯಡಿಯೂರಪ್ಪನವರ ಮೇಲೆ 20ಕ್ಕೂ ಹೆಚ್ಚು ಕೇಸುಗಳಿವೆ. ಮಿಷನ್ 150 ಠುಸ್ ಆಗಿದೆ. ಮೋದಿ ಎಷ್ಟು ಬಾರಿ ಬಂದರೂ ರಾಜ್ಯದ ಜನ ಅವರ ಮಾತನ್ನು ನಂಬಲ್ಲ ಎಂದರು.


ಸಂಬಂಧಿತ ಟ್ಯಾಗ್ಗಳು

siddaramaiah K.S.Eshwarappa ಪ್ರಣಾಳಿಕೆ ಮಿಷನ್ 150


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ