ವಿಜಯೇಂದ್ರ ಬೆಂಬಲಿಗರಿಗೆ ಬೆದರಿದ್ರಾ ಅಮಿತ್ ಷಾ?

Amit shah canceled his campaign at varuna

05-05-2018

ಬೆಂಗಳೂರು: ಬಿಜೆಪಿ ಅಧ್ಯಕ್ಷ ಅಮಿತ್ ಷಾ ತಮ್ಮ ಪೂರ್ವ ನಿಗದಿಯ ಕಾರ್ಯಕ್ರಮದಂತೆ ಇಂದು ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ನಡೆಸಬೇಕಿದ್ದ ಚುನಾವಣಾ ಪ್ರಚಾರವನ್ನು ಕೈಬಿಟ್ಟಿದ್ದಾರೆ. ಅಮಿತ್ ಷಾ, ಬೆಳಿಗ್ಗೆ ಮೈಸೂರಿಗೆ ಬಂದು ಅಲ್ಲಿಂದ ಮೊದಲು ನೇರವಾಗಿ ವರುಣಾ ವಿಧಾನಸಭಾ ಕ್ಷೇತ್ರಕ್ಕೆ ತೆರಳಿ ಪ್ರಚಾರಕೈಗೊಳ್ಳಬೇಕಿತ್ತು. ನಂತರ ಪಿರಿಯಾಪಟ್ಟಣದಲ್ಲಿ ಅಮಿತ್ ಷಾ ಕಾರ್ಯಕ್ರಮ ನಿಗದಿಯಾಗಿತ್ತು.

ಆದರೆ, ಅಮಿತ್ ಷಾ ಅವರ ವರುಣಾ ಕ್ಷೇತ್ರದ ಪ್ರಚಾರ ಈಗ ದಿಢೀರನೆ ರದ್ದಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ವರುಣಾ ಕ್ಷೇತ್ರದ ಟಿಕೆಟ್ ನಿರಾಕರಿಸಿದ ಕಾರಣಕ್ಕಾಗಿ ವಿಜಯೇಂದ್ರ ಬೆಂಬಲಿಗರು ಬಿಜೆಪಿ ವಿರುದ್ಧ ಅಭಿಯಾನ ಕೈಗೊಂಡಿದ್ದು, ಭಾರೀ ಪ್ರತಿಭಟನೆ ನಡೆಸಿದ್ದಾರೆ. ಇಂದೂ ಸಹ ಪ್ರತಿಭಟನೆ ನಡೆಸುವ ಸಾಧ್ಯತೆ ಇದ್ದ ಕಾರಣ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಇಂದು ನಿಗದಿಯಾಗಿದ್ದ ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ದಿಢೀರ್ ರದ್ದು ಮಾಡಿದ್ದಾರೆ .

ಈಗ ಅಮಿತ್ ಷಾ, ಮೈಸೂರಿನಿಂದ ನೇರವಾಗಿ ಪಿರಿಯಾಪಟ್ಟಣಕ್ಕೆ ತೆರಳಿ ನಂತರ ಟಿ.ನರಸೀಪುರ, ಹಾಗೂ ಮೈಸೂರು ನಗರದಲ್ಲಿರುವ ಕೃಷ್ಣ ರಾಜ, ಚಾಮರಾಜ ಹಾಗೂ ನರಸಿಂಹ ರಾಜ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.


ಸಂಬಂಧಿತ ಟ್ಯಾಗ್ಗಳು

amit shah B Y Vijayendra ಅಮಿತ್ ಷಾ ಪ್ರಚಾರ ಕಾರ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ