ಬಿಜೆಪಿಗೆ ಮೋಹನ್ ಭಾಗವತ್ ಸಲಹೆ

Mohan Bhagwat advises BJP

05-05-2018

ಬೆಂಗಳೂರು: ದಲಿತರ ಕುಟುಂಬಗಳ ಜೊತೆ ಊಟ ಮಾಡುವ ಮೂಲಕ ಅವರನ್ನು ಒಲಿಸಿಕೊಳ್ಳುವ ಬಿಜೆಪಿ ಯತ್ನವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್ ಎಸ್) ಟೀಕಿಸಿದೆ. ದಲಿತರ ಮನೆಯಲ್ಲಿ ಊಟ ಮಾಡಿ ಅಲ್ಲಿಗೆ ಮಾಧ್ಯಮದವರನ್ನು ಕರೆತಂದು ಪ್ರಚಾರ ಪಡೆಯವುದನ್ನು ಬಿಜೆಪಿ ನಿಲ್ಲಿಸಬೇಕಿದೆ. ಅದರ ಬದಲು ನಿರಂತರವಾಗಿ ದಲಿತರನ್ನು ಭೇಟಿಯಾಗಿ ಅವರ ಕಷ್ಟ-ಸುಖಗಳು ಮತ್ತು ನೋವು-ನಲಿವುಗಳಿಗೆ ಸ್ಪಂದಿಸಬೇಕು ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಲಹೆ ಮಾಡಿದ್ದಾರೆ. ಬಿಜೆಪಿ ಮುಖಂಡರು ದಲಿತರ ಮನೆಗಳಿಗೆ ಹೋಗುವುದಕ್ಕಿಂತ ತಮ್ಮ ಮನೆಗಳಿಗೇ ಅವರನ್ನು ಆಹ್ವಾನಿಸಬೇಕು ಹಾಗೂ ಜಾತೀಯತೆ ನಿರ್ಮೂಲನೆಗೆ ನೆರವಾಗಬೇಕೆಂದು ಅವರು ಹೇಳಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

RSS Mohan Bhagwat ದಲಿತ ಕುಟುಂಬ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ