ಬಿಜೆಪಿ ಕಾರ್ಯಕರ್ತರ ಮೇಲೆ ರಾಯರೆಡ್ಡಿ ಕಿಡಿ!

congress meeting: bjp workers v/s basavaraj Rayareddy

04-05-2018

ಕೊಪ್ಪಳ: ಕಾಂಗ್ರೆಸ್ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಜರಾಗಿದ್ದ ಹಿನ್ನೆಲೆಯಲ್ಲಿ, ಬಿಜೆಪಿ ಕಾರ್ಯಕರ್ತರನ್ನು ಕಂಡು ಕಿಡಿಕಾರಿದ ಸಚಿವ ಬಸವರಾಜ್ ರಾಯರೆಡ್ಡಿ, ನೀವು ಯಾರಾದರು ಇಲ್ಲಿ ಮಾತಾಡಿದರೆ ನಿಮ್ಮ ಮೇಲೆ ಕೇಸ್ ಹಾಕಿಸುತ್ತೇನೆ ಎಂದು ಹೆದರಿಸಿರುವ ಘಟನೆ ನಿನ್ನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ನಿನ್ನೆ ಯಲಬುರ್ಗಾ ತಾಲ್ಲೂಕಿನ‌ ಮುರುಡಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಭೆಯಲ್ಲಿ, ಬಿಜೆಪಿ ಕಾರ್ಯಕರ್ತರನ್ನು ಕಂಡ ಕೂಡಲೆ ಬಿಜೆಪಿ ಕಾರ್ಯಕರ್ತರಿಗೆ ಮಾನಹಾನಿ ಕೇಸ್ ಹಾಕಿಸುತ್ತೇನೆ ಎಂದು ಅವಾಜ್ ಹಾಕಿದ್ದಾರೆ.

ಇದು ಕಾಂಗ್ರೆಸ್ ಮೀಟಿಂಗ್, ಬಿಜೆಪಿಯವರು ಹೊರಗೆ ಹೋಗಿ ಎಂದ ಬಸವರಾಜ್ ರಾಯರೆಡ್ಡಿ. ಇದು ಕಾಂಗ್ರೆಸ್ ಕಾರ್ಯಕರ್ತರ ಸಭೆ ಬಿಜೆಪಿಯವರನ್ನ ಹೊರ ಹಾಕಿ ಎಂದು ಕಾರ್ಯಕರ್ತರಿಗೆ ಸೂಚನೆಯನ್ನೂ ನೀಡಿದ್ದಾರೆ ಎಂದು ತಿಳಿದು ಬಂದಿದೆ. ನಿಮ್ಮ ಪ್ರಶ್ನೆ ಏನಿದ್ದರೂ ನೀವು ಹೋಗಿ ಬಿಜೆಪಿ ಸಭೆಯಲ್ಲಿ ಕೇಳಿ, ಇದು ಕಾಂಗ್ರೆಸ್ ಕಾರ್ಯಕರ್ತರ ಮೀಟಿಂಗ್ ನೀವು ಇಲ್ಲಿ ಮಾತಾಡಬೇಡಿ ಎಂದು ತಾಕೀತು ಮಾಡಿದ್ದಾರೆ ಎನ್ನಲಾಗಿದೆ.


ಸಂಬಂಧಿತ ಟ್ಯಾಗ್ಗಳು

Basavaraj Rayareddy congress meeting ಮೀಟಿಂಗ್ ಮಾನಹಾನಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ