'ಎಷ್ಟು ಸ್ಮಾರ್ಟ್ ಸಿಟಿ ಮಾಡಿದ್ದೀರಿ'? -ಮನೀಶ್ ತಿವಾರಿ04-05-2018

ಬೆಂಗಳೂರು: ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಣಾಸಿ ಸಿಟಿಯಲ್ಲಿ ಸಮಸ್ಯೆ ಇದೆ. ಮೋದಿ 2014ರಲ್ಲಿ ಪ್ರಚಾರ ಮಾಡುವಾಗ ಅನೇಕ ಭರವಸೆಗಳನ್ನು ನೀಡಿದ್ದರು. ಆದರೆ ಯಾವುದೇ ಭರವಸೆ ಈಡೇರಿಸಲು ನಿಮ್ಮಿಂದ ಆಗಿಲ್ಲ ಎಂದು ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಹೇಳಿದ್ದಾರೆ.

100 ಸ್ಮಾರ್ಟ್ ಸಿಟಿ ಮಾಡುವುದಾಗಿ ಹೇಳಿದ್ದರು, ಆದರೆ ಎಷ್ಟು ಸ್ಮಾರ್ಟ್ ಸಿಟಿ ಮಾಡಿದ್ದೀರಾ? ಮೋದಿ ಅವರಿಗೆ ಸ್ಮಾರ್ಟ್ ಸಿಟಿಯ ಪರಿಕಲ್ಪನೆಯೇ ಗೊತ್ತಿಲ್ಲ. ಮೋದಿಗೆ ಸುಳ್ಳು ಹೇಳೋದು ಬಿಟ್ಟು ಬೇರೇನು ಬರೋದಿಲ್ಲ. ಸುಳ್ಳಿನ ಕಂತೆಯನ್ನು ಮೋದಿ ಜೋಡಿಸ್ತಾರೆ ಅಷ್ಟೆ ಎಂದು ಟೀಕಿಸಿದ್ದಾರೆ. ಪ್ರಧಾನಿ ಮೋದಿ ಕರ್ನಾಟಕ ಜನತೆಯ ಕ್ಷಮೆ ಕೇಳಬೇಕು ಎಂದು ತಿವಾರಿ ಆಗ್ರಹಿಸಿದರು.

ಜೆಡಿಎಸ್ ಕರ್ನಾಟಕಕ್ಕೆ ಹೊಸ ಪಕ್ಷ ಅಲ್ಲ. ಅನೇಕ‌ ವರ್ಷಗಳಿಂದ ಚುನಾವಣೆ ಎದುರಿಸುತ್ತಿದೆ ಎಂದು ಕುಟುಕಿದರು. ನಮಗೆ ಸಂಪೂರ್ಣ ನಂಬಿಕೆ ಇದೆ ಕಾಂಗ್ರೆಸ್ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಗೌರಿ ಲಂಕೇಶ್ ಹತ್ಯೆ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರಕರಣದಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಗೌರಿ ಲಂಕೇಶ್ ಹತ್ಯೆ ಎಲ್ಲರೂ ಖಂಡಿಸಬೇಕಾದ್ದು. ಸರ್ಕಾರ ಜವಾಬ್ದಾರಿಯುತವಾಗಿ ಈ ಕೇಸ್ ನಲ್ಲಿ ಕೆಲಸ ಮಾಡಿದೆ. ಆರೋಪಿಗಳನ್ನು ಬಂಧಿಸುವ ಕೆಲಸದಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದರು.

 


ಸಂಬಂಧಿತ ಟ್ಯಾಗ್ಗಳು

Manish Tewari Narendra Modi ಪ್ರಾಮಾಣಿಕ ವಿಶ್ವಾಸ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ