ರಾಜ್ಯದ 11 ಕಡೆಗಳಲ್ಲಿ ಎಸಿಬಿ ದಾಳಿ

ACB attack on 11 different places of the state

04-05-2018

ಬೆಂಗಳೂರು: ಕೋಲಾರ, ಬಳ್ಳಾರಿ, ಮೈಸೂರು, ಸೇರಿ ರಾಜ್ಯದ 11 ಕಡೆಗಳಲ್ಲಿ ಇಂದು ಮುಂಜಾನೆಯಿಂದ ದಾಳಿ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಅಧಿಕಾರಿಗಳು ನಾಲ್ವರು ಭ್ರಷ್ಟರನ್ನು ಬಲೆಗೆ ಕೆಡವಿ ಕೋಟ್ಯಾಂತರ ಮೌಲ್ಯದ ಅಕ್ರಮ ಆಸ್ತಿ ಪತ್ತೆಹಚ್ಚಿದ್ದಾರೆ.

ಬಳ್ಳಾರಿಯ ಕೆನಾಲ್ ಡಿವಿಷನ್‍ನ ಕಾರ್ಯಪಾಲಕ ಅಭಿಯಂತರ ಎಸ್.ಅಡಪ್ಪ, ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಇಂಡಿಯ ಡಿಪೋ ಮ್ಯಾನೇಜರ್ ರಾಜಶೇಖರ್ ಸುರೇಶ್ ಗಜಕೋಶ್, ಗುಂಡ್ಲುಪೇಟೆಯ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಅಭಿಯಂತರ ಎನ್.ರವಿಕುಮಾರ್, ಕೋಲಾರದ ಸಬ್ ರಿಜಿಸ್ಟ್ರಾರ್ ಕಚೇರಿಯ ದ್ವೀತಿಯ ದರ್ಜೆ ಸಹಾಯಕ ಅಶ್ವಥಪ್ಪ ಹೆಚ್.ವೈ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳಾಗಿದ್ದಾರೆ.

ಎಸ್.ಅಡಪ್ಪ ಅವರ ಬಳ್ಳಾರಿಯ ಗಾಂಧಿನಗರ ಕಚೇರಿ ಎರಡು ಮನೆ, ರಾಜಶೇಖರ್ ಅವರ ಕಚೇರಿ ವಿಜಯಪುರದಲ್ಲಿನ ವಾಸದ ಮನೆ ಸೇರಿ ಎರಡು ಮನೆ, ಎನ್.ರವಿಕುಮಾರ್ ಅವರ ಗುಂಡ್ಲುಪೇಟೆಯಲ್ಲಿನ ಕಚೇರಿ ಹಾಗು ನಿವಾಸ, ಮೈಸೂರಿನ ರಾಮಕೃಷ್ಣನಗರ, ಕುವೆಂಪುನಗರದಲ್ಲಿನ ಮನೆ ಸೇರಿ ಎರಡು ಮನೆ, ಅಶ್ವಥಪ್ಪನ ಕೋಲಾರದ ವಾಸದ ಮನೆ, ಕಚೇರಿ ಹಾಗೂ ಹಂಚನ ಗ್ರಾಮದ ಮತ್ತೊಂದು ಮನೆ ಮೇಲೆ ದಾಳಿ ನಡೆಸಿ ಆಪಾರ ಪ್ರಮಾಣದ  ಅಕ್ರಮ ಆಸ್ತಿ-ಪಾಸ್ತಿ ಪತ್ತೆಹಚ್ಚಿ ಪರಿಶೀಲನೆ ನಡೆಸಲಾಗಿದೆ.

ಬಲೆಗೆ ಬಿದ್ದಿರುವ ನಾಲ್ವರ ಅಧಿಕಾರಿಗಳಿಗೆ ಸೇರಿದ 11 ಕಡೆಗಳಲ್ಲಿ ದಾಳಿ ನಡೆಸಿ ವಶಪಡಿಸಿಕೊಂಡಿರುವ ನಗದು, ಚಿನ್ನಾಭರಣ, ಮನೆ ನಿವೇಶನಗಳ ದಾಖಲೆ ಪತ್ರಗಳ ಪರಿಶೀಲನೆ ನಡೆಸಲಾಗಿದೆ ಎಂದು ಎಸಿಬಿಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಆಲೋಕ್‍ ಮೋಹನ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ACB Raid ಭ್ರಷ್ಟಾಚಾರ ಮ್ಯಾನೇಜರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ