ಮೆಟ್ರೋ ರೈಲಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ

Sexual harassment on a woman at metro train

04-05-2018

ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ ಮಹಿಳೆಯ ಮೈಗೆ ಮೈ ತಾಗಿಸಿ ಲೈಂಗಿಕ ಕಿರುಕುಳ ನೀಡಿದ ಖಾಸಗಿ ಕಂಪನಿಯೊಂದರ ಉದ್ಯೋಗಿಯನ್ನು ಸಹ ಪ್ರಯಾಣಿಕರೇ ಹಿಡಿದು ಥಳಿಸಿ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಉತ್ತರಹಳ್ಳಿ ವಸಂತ ವಲ್ಲಭ ನಗರ ನಿವಾಸಿ ಪ್ರವೀಣ್ ಜಿ.ಹೆಗ್ಡೆ (27) ಬಂಧಿತ ಆರೋಪಿಯಾಗಿದ್ದಾನೆ. 30 ವರ್ಷದ ಮಹಿಳೆಯೊಬ್ಬರು ಸಂಜೆ 5.20ರ ಸುಮಾರಿಗೆ ಮೆಟ್ರೊ ರೈಲಿನಲ್ಲಿ ರಾಜಾಜಿನಗರದಿಂದ ಬನಶಂಕರಿಗೆ ಹೊರಟಿದ್ದರು. ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಆರೋಪಿ ಪ್ರವೀಣ್, ರೈಲು ಮೆಜೆಸ್ಟಿಕ್ ನಿಲ್ದಾಣ ತಲುಪುತ್ತಿದ್ದಂತೆ ಮಹಿಳೆಗೆ ಅಂಟಿಕೊಂಡು ನಿಂತು ಕಿರುಕುಳ ನೀಡಿದ್ದಾನೆ. ಜನಸಂದಣಿಯಿಂದ ಸಾಮಾನ್ಯ ಎಂದು ಕೊಂಡಿದ್ದ ಮಹಿಳೆಯು ಸಮ್ಮನಾಗಿದ್ದು ರೈಲು ಜಯನಗರ ತಲುಪುತ್ತಿದ್ದಂತೆ ಮತ್ತೆ ಆತ ಕಿರುಕುಳ ನೀಡಲು ಮುಂದಾಗಿದ್ದಾನೆ.

ಇದನ್ನು ಗಮನಿಸಿದ ಸಾರ್ವಜನಿಕರು ಆರೋಪಿಯನ್ನು ಜಯನಗರ ನಿಲ್ದಾಣದಲ್ಲಿ ಕೆಳಗೆ ಇಳಿಸಿ ಥಳಿಸಿ ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ನಂತರ ಆರೋಪಿಯನ್ನು ಜಯನಗರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.

ಬಿ.ಕಾಂ ವ್ಯಾಸಂಗ ಮಾಡಿರುವ ಪ್ರವೀಣ್, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಸಂತ್ರಸ್ತ ಮಹಿಳೆ ನೀಡಿದ ದೂರು ಆಧರಿಸಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ. ನ್ಯಾಯಾಲಯ ಆತನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ ಎಂದು ದಕ್ಷಿಣ ವಿಭಾಗ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Rape madirorge punishment hagtilla...ennu edakke hen thane punishment haguthe...enthorna public ge kodbeku legal na follow hagbardu...
  • Suma
  • Advocate