ವ್ಯಕ್ತಿ ತಲೆ ಕತ್ತರಿಸಿ ಮನೆ ಮುಂದೆ ಎಸೆದು ಹೋದರು!

Horrific murder at bangalore

04-05-2018

ಬೆಂಗಳೂರು: ಗಂಗಮ್ಮನಗುಡಿ ರಾಮಚಂದ್ರಾಪುರದಲ್ಲಿ ನಿನ್ನೆ ರಾತ್ರಿ ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಮಾರಕಾಸ್ತ್ರಗಳಿಂದ ಡೇವಿಡ್ ಎಂಬಾತನ ತಲೆ ಕತ್ತರಿಸಿ ಕೊಲೆ ಮಾಡಿರುವ ದುಷ್ಕರ್ಮಿಗಳು ದೇಹವನ್ನು ಬಿಟ್ಟು ತಲೆಯನ್ನು ಆತನ ಮನೆಯ ಬಳಿ ಎಸೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ.

ರಾತ್ರಿ 10.30ರ ವೇಳೆ ಬೈಕ್‍ನಲ್ಲಿ ಬಿಇಎಲ್ ವೃತ್ತದ ಕಡೆಯಿಂದ ಮನೆಗೆ ವಿದ್ಯಾರಣ್ಯಪುರದ 4ನೇ ಕ್ರಾಸ್‍ನ ದೊಮ್ಮಸಂದ್ರದ ಡೇವಿಡ್ (23) ಹೋಗುತ್ತಿದ್ದಾಗ ಅಡ್ಡಗಟ್ಟಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ತಲೆ ಕತ್ತರಿಸಿ ಕೊಲೆ ಮಾಡಿದ್ದಾರೆ. ನಂತರ ತಲೆಯನ್ನು ತೆಗೆದುಕೊಂಡು ಹೋಗಿ ಆತನ ಮನೆ ಬಳಿ ಎಸೆದು ಪರಾರಿಯಾಗಿದ್ದಾರೆ.

ತಲೆಯಿಲ್ಲದ ದೇಹ ನೋಡಿದ ಸ್ಥಳೀಯರು ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಗಂಗಮ್ಮನಗುಡಿ ಪೊಲೀಸರು ಬೈಕ್ ಮತ್ತು ಆತನ ಜೇಬಿನಲ್ಲಿದ್ದ ಐಡಿ ಕಾರ್ಡ್‍ಗಳಿಂದಾಗಿ ಕೊಲೆಯಾದವನು ಡೇವಿಡ್ ಎಂದು ಪತ್ತೆಹಚ್ಚಿ ಆತನ ಮನೆಯ ಬಳಿ ಪರಿಶೀಲನೆ ನಡೆಸಲು ಹೋದಾಗ ಹತ್ತಿರದಲ್ಲಿ ಬಿದ್ದಿದ್ದ ತಲೆ ಪತ್ತೆಯಾಗಿದೆ.

ವೈಯಕ್ತಿಕ ದ್ವೇಷವೇ ಈ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ. ಬೆದರಿಕೆ ಸುಲಿಗೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಡೇವಿಡ್ ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಕಳವು ಪ್ರಕರಣವೊಂದರಲ್ಲಿ ಭಾಗಿಯಾಗಿದ್ದಾನೆ. ಯಾವುದೇ ಕೆಲಸಕ್ಕೆ ಹೋಗದೇ ಓಡಾಡಿಕೊಂಡಿದ್ದ ಆತನನ್ನು ಹಳೇ ದ್ವೇಷದ ಹಿನ್ನಲೆಯಲ್ಲಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಪ್ರಕರಣ ದಾಖಲಿಸಿರುವ ಗಂಗಮ್ಮನಗುಡಿ ಪೊಲೀಸರು ಡೇವಿಡ್ ಎದುರಾಳಿ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ಡಿಸಿಪಿ ಚೇತನ್‍ಸಿಂಗ್ ರಾತೋರ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Murder Horrific ವಿಚಾರಣೆ ಐಡಿ ಕಾರ್ಡ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ