ಪ್ರಧಾನಿ ಮೋದಿಗೆ ಪರಮೇಶ್ವರ್ ಟಾಂಗ್

G.Parameshwara v/s Narendra modi

04-05-2018

ಬೆಂಗಳೂರು: ಕರ್ನಾಟಕದ ಒಂದು ಆಕ್ಟೀವ್, ಪ್ರೋಗ್ರೆಸ್ಸೀವ್ ಸ್ಟೇಟ್. ರಾಜ್ಯದ ಬಗ್ಗೆ ಅವಮಾನ ಮಾಡುವಂತಹ ಮಾತುಗಳನ್ನು ಹೇಳಬೇಡಿ, ಸುಳ್ಳು ಹೇಳೋದನ್ನ ನಿಲ್ಲಿಸಿ, ಪ್ರಧಾನಿ ಮೋದಿ ಕರ್ನಾಟಕಕ್ಕೆ, ಬೆಂಗಳೂರಿಗೆ ಅವಮಾನ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿದ್ದಾರೆ.

ದೇಶದಲ್ಲಿ ಮಾದರಿಯಾಗುವ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಆನ್ ಲೈನ್ ಎಪಿಎಂಸಿಗಳನ್ನು ಮಾಡಲಾಗಿದೆ. 1 ಲಕ್ಷಕ್ಕಿಂತ ಅಧಿಕ ಇಂಗು ಗುಂಡಿಗಳನ್ನು ಮಾಡಿದ್ದೆವು ಅದಕ್ಕೂ ಕೇಂದ್ರ ಸಹಕಾರ ನೀಡಿಲ್ಲ. ಭ್ರಷ್ಟಾಚಾರ ಸರ್ಕಾರ ಅಂತಿದ್ದೀರಿ ನಿಮ್ಮ ಬಳಿ ಆಧಾರ ಇದ್ದರೆ ಜನರಿಗೆ ತೋರಿಸಿ,  ನಂತರ ಜನ ಅದನ್ನು ತೀರ್ಮಾನ ಮಾಡುತ್ತಾರೆ, ಅದನ್ನು ಬಿಟ್ಟು ಬೋಗಳೆ ಬಿಡಬೇಡಿ ಎಂದು ಬಿಜೆಪಿಗೆ ಟಾಂಗ್ ನೀಡಿದ್ದಾರೆ.

ನಮ್ಮ ಸರ್ಕಾರದಿಂದ ರೈತರ ಸಾಲ ಮನ್ನಾ ಮಾಡಿದ್ದೇವೆ, 22 ಲಕ್ಷ ರೈತರ 50 ಸಾವಿರದೊಳಗಿನ ಸಾಲ ಮನ್ನಾ ಮಾಡಲಾಗಿದೆ. ಭ್ರಷ್ಟಾಚಾರದ ಸರ್ಕಾರ ಅಂತ ಆರೋಪ ಮಾಡುವ ನೀವು ದಾಖಲೆಗಳಿದ್ದರೆ ಹೋಗಿ ಜನರ ಮುಂದೆ ಬಹಿರಂಗಪಡಿಸಿ. ಅದನ್ನು ಬಿಟ್ಟು ರಾಜ್ಯದ ಜನರನ್ನು ಇನ್ಸಲ್ಟ್ ಮಾಡಬೇಡಿ, ಸುಳ್ಳು ಸುಳ್ಳು ಆರೋಪ ಮಾಡುವುದನ್ನ ಬಿಡಿ ಎಂದು ಹೇಳಿದ್ದಾರೆ. ರೈತರ ಬಗ್ಗೆ ಕರುಣೆ ಇದ್ದರೆ ಪ್ರಧಾನಿ ಮೋದಿ ಅವರು ರೈತರ ಸಾಲ ಮನ್ನಾ ಮಾಡಬೇಕಿತ್ತು. ಆದರೆ ಅವರು ಹಾಗೇ ಮಾಡಲೇ ಇಲ್ಲ ಎಂದು ದೂರಿದ್ದಾರೆ.


ಸಂಬಂಧಿತ ಟ್ಯಾಗ್ಗಳು

KPCC G.Parameshwara ಬಹಿರಂಗ ಭ್ರಷ್ಟಾಚಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ