ಪ್ರಧಾನಿ ಮೋದಿ ವಿರುದ್ಧ ಹೆಚ್ಡಿಕೆ ವಾಗ್ದಾಳಿ04-05-2018

ವಿಜಯಪುರ: ಪ್ರಧಾನಿ ಮೋದಿ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನೆಡೆಸಿದ್ದಾರೆ. ವಿಜಯಪುರದ ಮುದ್ದೇಬಿಹಾಳ ಪಟ್ಟಣಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಓವೈಸಿ ಜೆಡಿಎಸ್ ಪರ ಪ್ರಚಾರ ಪ್ರಚಾರ ಹಿನ್ನೆಲೆ ಜೆಡಿಎಸ್ ಉಗ್ರಗಾಮಿಗಳನ್ನ ರಾಜ್ಯಕ್ಕೆ ಕರೆಸಿಕೊಳ್ಳುತ್ತಿದೆ ಎನ್ನುವ ಮೋದಿ ಹೇಳಿಕೆಗೆ ಕೆಂಡಾಮಂಡಲರಾದ ಹೆಚ್ಡಿಕೆ, ಮೋದಿ ತಮ್ಮ ಪಕ್ಷದಲ್ಲೆ ಟೆರೆರಿಸ್ಟ್ ಗಳನ್ನ ಇಟ್ಟುಕೊಂಡಿದ್ದೀರಿ. ಜೆಡಿಎಸ್ ಕರ್ನಾಟಕದಲ್ಲಿ ಟೆರರಿಸ್ಟ್ಗಳಿಗೆ ಪ್ರೋತ್ಸಾಹ ಕೊಟ್ಟಿಲ್ಲ. ಯಾವಾಗ ಯಾವಾಗ ಟೆರರಿಸ್ಟ್ ಆಕ್ಟಿವಿಟೀಸ್ ಮಾಡಬೇಕು ಎನ್ನುವ ನಿಮ್ಮಂಥ ಅತಿ ಬುದ್ಧಿವಂತಿಕೆ ನಮ್ಮಲ್ಲಿಲ್ಲ ಎಂದು ಮಾರ್ಮಿಕವಾಗಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಉಗ್ರರ ಚಟುವಟಿಕೆಗಳಿಗೆ ಜೆಡಿಎಸ್ ಎಂದೂ ಬೆಂಬಲ ಕೊಡಲ್ಲ ಅನ್ನೋದನ್ನ ಮೋದಿ ಮೊದಲು ತಿಳಿದುಕೊಳ್ಳಬೇಕು ಎಂದರು.


ಸಂಬಂಧಿತ ಟ್ಯಾಗ್ಗಳು

Narendra Modi H.D.Kumaraswamy ಮಾರ್ಮಿಕ ಟೆರೆರಿಸ್ಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ