ಪುಂಡರ ಗ್ಯಾಂಗ್ ಮಹಿಳೆಯೊಂದಿಗೆ ಅಸಭ್ಯ ವರ್ತನೆ

indecent behavior with the woman at bus stop

04-05-2018

ಬೆಂಗಳೂರು: ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ನಿನ್ನೆ ರಾತ್ರಿ ಕಂಠ ಪೂರ್ತಿ ಕುಡಿದಿದ್ದ ಯುವಕರು ಮಹಿಳೆ ಜೊತೆ ಅಸಭ್ಯವಾಗಿ ವರ್ತಸಿದ ಘಟನೆ ನಡೆದಿದೆ. ಕಾಮುಕ ಯುವಕರು ಅತಿ ವೇಗದಲ್ಲಿ ಕಾರು ಚಾಲನೆ ಮಾಡಿ ಮಹಿಳೆಯೊಬ್ಬರ ಮುಂದೆ ಅಸಭ್ಯ ವರ್ತನೆ ತೋರಿಸಿದ್ದಾರೆ. ಅಲ್ಲದೇ ಕಾರನ್ನು ಹಿಂದಿಕ್ಕಿ ಮಧ್ಯ ಬೆರಳು ತೋರಿಸಿದ್ದಾರೆ.

ಯುವಕರು ಅಸಭ್ಯವಾಗಿ ವರ್ತನೆ ಮಾಡಿದ ದೃಶ್ಯವನ್ನು ಮಹಿಳೆ ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಯುವಕರಿದ್ದ ವಾಹನ ಮಹಾರಾಷ್ಟ್ರ ನೋಂದಣಿಯದ್ದಾಗಿದ್ದು ಯುವಕರು ಕುಡಿದು ವಾಹನ ಚಾಲನೆ ಮಾಡುತ್ತಿದ್ದರು, ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಣಸವಾಡಿಯ ಲಿಂಗಾರಾಜಪುರದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸಿ ಕಾಲಿನಿಂದ ಒದ್ದು ಪುಂಡರು ಹಲ್ಲೆ ಮಾಡಿದ್ದ ಕೃತ್ಯ ಮಾಸುವ ಮುನ್ನವೇ ಅಂತಹುದೇ ಕೃತ್ಯ ಪುನರಾರ್ವತನೆಯಾಗಿದೆ.


ಸಂಬಂಧಿತ ಟ್ಯಾಗ್ಗಳು

women Bus stand ಸ್ಯಾಟಲೈಟ್ ಮಹಾರಾಷ್ಟ್ರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ