ಪಿಎಸ್ ಐ ಹಲ್ಲೆ ಪ್ರಕರಣ ಕ್ಲೀನ್ ಚಿಟ್ 

Kannada News

23-05-2017

ಬೆಳಗಾವಿ:- ಬಾರ್ ಗೆ ನುಗ್ಗಿ ಸಿಬ್ಬಂದ್ಧಿಗಳ ಮೇಲೆ ಪಿಎಸ್ ಐ ಹಲ್ಲೆ ಪ್ರಕರಣಕ್ಕೆ ಸಂಭಂದಿಸಿದಂತೆ ಇಲಾಖೆ ವಿಚಾರಣೆಯಲ್ಲಿ ಕ್ಲೀನ್ ಚಿಟ್ ನೀಡಿದೆ. ಆದರೆ ಬಾರ್ ಮಾಲೀಕರು ತನಿಖಾವರದಿಯು ಪಿಎಸ್ ಐ ಪರವಾಗಿದೆ ಎಂದು ಆರೋಪ ಮಾಡಿದ್ದಾರೆ. ಮಾರ್ಚ 13ರಂದು ಕುಡಚಿ ಪಟ್ಟಣದಲ್ಲಿ ನಡೆದಿದ್ದ ಘಟನೆ
ಶಿವಶಕ್ತಿ ಬಾರ್ ನುಗ್ಗಿ ಅಲ್ಲಿನ ಸಿಬ್ಬಂದ್ಧಿಗಳ ಮೇಲೆ ಹಲ್ಲೆ ನಡೆಸಿದ್ದ ಪಿಎಸ್ ಐ
ಮಾ.18ರಂದು ಐಜಿಪಿ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದರು.
ಡಿಸಿಆರ್ ಬಿ ಘಟಕದ ಡಿವೈಎಸ್ಪಿ ಎಸ್.ಎಂ.ನಾಗರಾಜ್ ಗೆ ತನಿಖೆಗೆ ಸೂಚಿಸಿದ್ರು.
ಕಳೆದ ಮಾರ್ಚ 27ರಂದೇ ತನಿಖೆ ನಡೆಸಿ ವರದಿ ನೀಡಿರುವ ನಾಗರಾಜ್ .

ವರದಿಯಲ್ಲಿರುವ ಅಂಶಗಳು ಹೀಗಿವೆ.

-ಪಿಎಸ್ ಐ ಹಲ್ಲೆ ನಡೆಸಿದ ಸಿಸಿಟಿವ್ಹಿ ದೃಶ್ಯಾವಳಿಗಳ ಬಗ್ಗೆಯೇ ತನಿಖಾಧಿಕಾರಿಯಿಂದ ಅನುಮಾನ
-ಬಾರ್ ನಲ್ಲಿ ಸಿಕ್ಕಿರುವ ಸಿಸಿಟಿವ್ಹಿ ದೃಶ್ಯಾವಳಿಗಳಲ್ಲಿ ಸ್ಪಷ್ಟತೆ ಕೊರತೆ ಇದೆ.
-ಸಿಸಿಟಿವ್ಹಿ ದೃಶ್ಯಾವಳಿಗಳು ನಿಜವೆಂದು ನಂಬಲು ಸಾಧ್ಯವಿಲ್ಲ ಅಂತಾ ವರದಿಯಲ್ಲಿ ಉಲ್ಲೇಖ 
-ಬಾರ್ ಸಿಬ್ಬಂದ್ಧಿಯಿಂದ ಉದ್ದೇಶಪೂರ್ವಕ ಘಟನೆಯ ಅತಿಯಾದ ರಂಜನೆ 
-ಇದಕ್ಕಾಗಿಯೇ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯದೇ, ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ 
-ಪಿಎಸ್ ಐ ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿಲ್ಲ, ಹಿಗ್ಗಾಮುಗ್ಗಾ ಥಳಿಸಿದ್ದಾರೆಂಬುದು ಸುಳ್ಳು.
-ಘಟನೆ ದಿನ ಮದ್ಯ ಮಾರಾಟ ನಿಷೇಧವಿದ್ದರೂ ಬಾರ್ ನಲ್ಲಿ ಮದ್ಯ ಮಾರಾಟ ಮಾಡಲಾಗುತಿತ್ತು.
-ಪೋಲಿಸ್ ಅಧಿಕಾರಿಗಳಲ್ಲಿ ಭಯ ಹುಟ್ಟಿಸಲು ಈ ಆಪಾದನೆ ಮಾಡಲಾಗಿದೆ.
-ಪಿಎಸ್ ಐ ಪ್ರತಿ ತಿಂಗಳು 30ಸಾವಿರ ರೂ. ಮಾಮೂಲಿ ಪಡೆಯುತ್ತಾರೆಂಬ ಆರೋಪ ಶುದ್ದ  ಸುಳ್ಳು 
-ಪಿಎಸ್ ಐ ಯಾವುದೇ ನೀರಿನ ಬಾಟಲ್ , ತಂಪು ಪಾನೀಯ ದೋಚಿಲ್ಲ
-ಬಾರ್ ಮಾಲೀಕ ನೀಡಿದ ದೂರು ಸತ್ಯಕ್ಕೆ ದೂರವಾದದ್ದು. ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ