13ಲಕ್ಷ ಮೌಲ್ಯದ ಅಕ್ರಮ ಮದ್ಯ ವಶ

Rs.13 lakh worth Illegal alcohol seized

04-05-2018

ಬೆಳಗಾವಿ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆ ದಾಖಲೆ ಇಲ್ಲದ ನಗದು, ಅಕ್ರಮ ಮದ್ಯದ ಮೇಲೆ ಚುನಾವಣಾ ಆಯೋಗ, ಪೊಲೀಸರು, ಅಬಕಾರಿ ಇಲಾಖೆ ತೀವ್ರ ನಿಗಾವಹಿಸಿದೆ. ಬೆಳಗಾವಿಯ ಖಾನಾಪುರ ಪಟ್ಟಣದ ಹೊರ ವಲಯದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 13ಲಕ್ಷ ಮೌಲ್ಯದ 750ಬಾಕ್ಸ್ ಮದ್ಯ, ಒಂದು ಕಂಟೇನರ್ ವಾಹನವನ್ನು ಜಪ್ತಿ ಮಾಡಲಾಗಿದೆ. ಆರೋಪಿ ಗುಜರಾತ್ ಮೂಲದ ಪವನ್ ಮೂರ್ಜಿ ಗಾಂಧಿ ಎಂಬಾತನನ್ನು ಬಂಧಿಸಲಾಗಿದೆ. ನಂದಗಡದಿಂದ ಖಾನಾಪುರ ಬರುತ್ತಿದ್ದ ಕಂಟೆನರ್ ವಾಹನದ ಮೇಲೆ ಕಣ್ಣಿಟ್ಟಿದ್ದ ಅಬಕಾರಿ ಅಧಿಕಾರಿಗಳು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಅಕ್ರಮ ಮದ್ಯ ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

illegal liquor ಅಬಕಾರಿ ವಿಧಾನಸಭೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ