ಶೋಭಾ ಕರಂದ್ಲಾಜೆ ವಿರುದ್ಧ ಗೋಪಿಕೃಷ್ಣ ಆಕ್ರೋಶ

Gopikrishna outrage against Shobha Karandlaje

04-05-2018

ಚಿಕ್ಕಮಗಳೂರು: ಸಂಸದೆ ಹಾಗು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ವಿರುದ್ಧ ಬಿಜೆಪಿ ಬಂಡಾಯ ಅಭ್ಯರ್ಥಿ ಗೋಪಿಕೃಷ್ಣ ಆಕ್ರೋಶ ಹೊರಹಾಕಿದ್ದಾರೆ. ಗೋಪಿಕೃಷ್ಣ ಬಿಜೆಪಿ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಶೋಭಾ ಕರಂದ್ಲಾಜೆ ನಿನ್ನೆ ಹೇಳಿಕೆ ನೀಡಿದ್ದರು. ಶೋಭಾ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಗೋಪಿಕೃಷ್ಣ, ನಾನು ಬಿಜೆಪಿ ಬೆನ್ನಿಗೆ ಚೂರಿ ಹಾಕಿಲ್ಲ. ನನಗೆ ಟಿಕೆಟ್ ತಪ್ಪಿಸಿ ನನ್ನ ಬೆನ್ನಿಗೆ ಚೂರಿ ಹಾಕಿದ್ದು ಶೋಭಾ ಕರಂದ್ಲಾಜೆ, ಎಲ್ಲಿಯವರೆಗೆ ಶೋಭಾ ಕರಂದ್ಲಾಜೆ‌ ಬಿಜೆಪಿಯಲ್ಲಿ ಇರುತ್ತಾರೆ ಅಲ್ಲಿಯವರೆಗೂ ಬಿಜೆಪಿ ಉದ್ಧಾರ ಆಗಲ್ಲ ಎಂದು ಕಿಡಿಕಾರಿದ್ದಾರೆ.

ಎಲ್ಲಾ ‘ಬಿ’ ಫಾರಂಗಳೂ ಶೋಭಾ ಮನೆಯಲ್ಲಿಯೇ ಅಂತಿಮ ಆಗೋದು. ರಾಜ್ಯದಲ್ಲಿ ಎಲ್ಲಿಯವರೆಗೆ ‘ಬಿ’ ಫಾರಂ ಅವರ ಮನೆಗೆ ಕೊಡುತ್ತಾರೋ ಅಲ್ಲಿಯವರೆಗೂ ಬಿಜೆಪಿ ಉದ್ಧಾರ ಆಗಲ್ಲ. ಕಳೆದ ಐದು ವರ್ಷ ಬಿಜೆಪಿಗಾಗಿ‌ ಕ್ಷೇತ್ರದಲ್ಲಿ ದುಡಿದಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ದುಡಿಸಿಕೊಂಡರು. ಆದರೆ ಈಗ ನನ್ನ ಬೆನ್ನಿಗೆ ಚೂರಿ ಹಾಕಿದ್ದು ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ಎಂದು ದೂರಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ