ಬಿಜೆಪಿ ದೊಡ್ಡ ಸ್ವತ್ತನ್ನು ಕಳೆದುಕೊಂಡಿದೆ -ಸದಾನಂದಗೌಡ

The BJP has lost big property -sadananda gowda

04-05-2018

ಬೆಂಗಳೂರು: ಕೇಂದ್ರ ಸಚಿವ ಸದಾನಂದಗೌಡರು ಶಾಸಕ ವಿಜಯ್ ಕುಮಾರ್ ಅವರ ಅಂತಿಮ ದರ್ಶನ ಪಡೆದರು. ಈ ವೇಳೆ ತಮ್ಮ ಪಕ್ಕದಲ್ಲೇ ಇದ್ದ ಅನಂತ್ ಕುಮಾರ್, ಸದಾನಂದ ಗೌಡ ಒಬ್ಬರಿಗೊಬ್ಬರು ಅಪ್ಪಿಕೊಂಡು ಕಣ್ಣೀರು ಹಾಕಿದರು. ನಂತರದಲ್ಲಿ ಮಾತನಾಡಿದ ಸಚಿವ ಸದಾನಂದಗೌಡ, ನನಗೆ ಏನು ಹೇಳಬೇಕು ಎಂದು ಅರ್ಥವಾಗುತ್ತಿಲ್ಲ, ಬಿಜೆಪಿ ದೊಡ್ಡ ಸ್ವತ್ತನ್ನು ಕಳೆದುಕೊಂಡಿದೆ. ಬೆಂಗಳೂರಿಗೆ ಇದು ದೊಡ್ಡ ಆಘಾತವಾಗಿದೆ. ನಿಷ್ಠಾವಂತ ಕಾರ್ಯಕರ್ತ ಈಗ ನೆನಪು ಮಾತ್ರ ಎಂದು ಭಾವುಕರಾದರು.

25 ವರ್ಷದಿಂದ ಅವರ-ನನ್ನ ಒಡನಾಟವಿತ್ತು. ನಾನು ರಾಜ್ಯಾಧ್ಯಕ್ಷನಾಗಿದ್ದಾಗ ಅವರು ಬೆಂಗಳೂರು ಘಟಕದ ಅಧ್ಯಕ್ಷರಾಗಿದ್ದರು. ಶಾಸಕರಾಗಿದ್ದರೂ ಸಾಮಾನ್ಯ ಕಾರ್ಯಕರ್ತರಾಗಿದ್ದರು. ಪಕ್ಷದ ಕಾರ್ಯ ಇದ್ದಾಗ ಹಗಲಿರುಳು ಶ್ರಮಿಸುತ್ತಿದ್ದ ಅವರು, ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಇನ್ನೂ 15 ವರ್ಷ ಅವರ ಸೇವೆ ನಿರೀಕ್ಷೆ ಮಾಡಿದ್ದೆವು ಆದರೆ ಸಾವು ಅನೀಕ್ಷಿತ. ಅವರು ಈ ಬಾರಿ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತಿದ್ದರು. ಮೇಲಿಂದಲೇ ಅವರು ನಮಗೆ ಆರ್ಶಿವಾದ ಮಾಡಲಿ ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

sadananda gowda vijayakumar ನಿಷ್ಠಾವಂತ ಭಾವುಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ