‘ವಿಜಯ್ ಕುಮಾರ್ ನಿಧನ ಸಿಡಿಲು ಬಡಿದಂತಾಗಿದೆ’

Minister Ananth kumar condolence to vijay kumar

04-05-2018

ಬೆಂಗಳೂರು: ಜಯನಗರ ಶಾಸಕ ವಿಜಯ್ ಕುಮಾರ್ ಪಾರ್ಥಿವ ಶರೀರ ಕಂಡು ದುಖಃತಪ್ತರಾದ ಕೇಂದ್ರ ಸಚಿವ ಅನಂತ ಕುಮಾರ್ ಬಾವುಕರಾದರು. ಅಂತಿನ ದರ್ಶನದ ನಂತರ ಮಾತನಾಡಿದ ಅವರು, ನನಗೆ ಆಘಾತವಾಗಿದೆ. ನನ್ನ ಆತ್ಮೀಯ ಗೆಳೆಯ ಪ್ರಚಾರದ ವೇಳೆ ಕುಸಿದು ಬಿದ್ದಿದ್ದಾರೆ. ಜಯದೇವ ಆಸ್ಪತ್ರೆಯಲ್ಲಿ ಕೊನೇ ಹಂತದ ವರೆಗೂ ಅವರನ್ನು ಉಳಿಸುವ ಯತ್ನ ನಡೀತು. ಆದರೆ, ಅದು ಫಲಕಾರಿಯಾಗಲಿಲ್ಲ, ಈ ವಿಚಾರ ಸಿಡಿಲು ಬಡಿದಂತಾಗಿದೆ. ಬಾಲ್ಯದಿಂದಲೂ ಆರ್.ಎಸ್.ಎಸ್ ನಲ್ಲಿ ಗುರುತಿಸಿಕೊಂಡಿದ್ದ ವಿಜಯ್ ಕುಮಾರ್ ಮದುವೆ ಸಹ ಮಾಡಿಕೊಳ್ಳದೇ ದೇಶ ಸೇವೆಗೆ ತೊಡಗಿಸಿಕೊಂಡಿದ್ದರು.

ಎರಡು ಬಾರಿ ಶಾಸಕರಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಇಡೀ ರಾಜ್ಯಕ್ಕೆ ಮಾದರಿ ಶಾಸಕರಾಗಿದ್ದಾರೆ ಎಂದು ವಿಜಯ್ ಕುಮಾರ್ ಅವರನ್ನು ನೆನೆದು ಕಣ್ಣೀರಿಟ್ಟರು. ನನಗೆ ಏನು ಹೇಳಬೇಕು ಅನ್ನೋದು ತೋಚುತ್ತಿಲ್ಲ. 40 ವರ್ಷದ ಒಡನಾಟದಲ್ಲಿ, ಕುಟುಂಬದ ಸದಸ್ಯರ ರೀತಿ ನಾವೆಲ್ಲ ಇದ್ದೆವು. ಜಯನಗರದಲ್ಲಿ ಮೊದಲ ಬಾರಿ ಒತ್ತಾಯದ ಮೇರೆಗೆ ಚುನಾವಣೆಗೆ ನಿಲ್ಲಿಸಿದ್ದೆವು. ಈ ಬಾರಿಯೂ ನನಗೆ ಟಿಕೆಟ್ ಬೇಡ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು, ಆದರೆ ಒತ್ತಾಯಿಸಿ ಈ ಬಾರಿಯೂ ಅವರನ್ನೇ ಅಭ್ಯರ್ಥಿ ಮಾಡಿದ್ದೆವು ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

Ananth Kumar vijay kumar ಅಭ್ಯರ್ಥಿ ಅಭಿಪ್ರಾಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ