ದಾಖಲೆ ಇಲ್ಲದ 12ಲಕ್ಷ ನಗದು ವಶ

12 lakh cash seized in check post

03-05-2018

ವಿಜಯಪುರ: ಜಿಲ್ಲೆಯ ಧೂಳಖೇಡ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ ದಾಖಲೆ ಇಲ್ಲದ 12ಲಕ್ಷ ನಗದು ಪತ್ತೆಯಾಗಿದೆ. ಇಂಡಿ ತಾಲ್ಲೂಕಿನ ಧೂಳಖೇಡ ಚೆಕ್ ಪೋಸ್ಟ್ ಬಳಿ, ಚುನಾವಣಾ ಅಧಿಕಾರಿಗಳು ಹಾಗೂ ಝಳಕಿ ಠಾಣೆ ಪೊಲೀಸರಿಂದ ತಪಾಸಣೆ ವೇಳೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸೇರಿ 12ಲಕ್ಷ ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಎರಡು ಸರ್ಕಾರಿ ಬಸ್ ಗಳ ತಪಾಸಣೆ ನಡೆಸುವಾಗ ಅಕ್ರಮ ಹಣ ಪತ್ತೆಯಾಗಿದೆ.

ಮಹಾರಾಷ್ಟ್ರದಿಂದ ಹುಬ್ಬಳ್ಳಿಗೆ ಹೊರಟಿದ್ದ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಬಳ್ಳೊಳ್ಳೆಪ್ಪ ಹಗರಿ ಬಳಿ ನಾಲ್ಕು ಲಕ್ಷ ದಾಖಲೆ ಇಲ್ಲದ ಹಣ, ಸೋಲಾಪುರದಿಂದ ಸಿಂದಗಿಗೆ ಹೊರಟಿದ್ದ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ತಿಪ್ಪೇಸ್ವಾಮಿ ಬಳಿ ದಾಖಲೆ ಇಲ್ಲದ ಎಂಟು ಲಕ್ಷ ಹಣ ಪತ್ತೆಯಾಗಿದೆ. ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

illegal money ಚೆಕ್ ಪೋಸ್ಟ್ ಧೂಳಖೇಡ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Happening in all elections, will they are going to jail ?
  • Raju Shetty
  • SOftware Engineer