ಸುಪ್ರೀಂ ಆದೇಶ ಪಾಲನೆ ಸಾಧ್ಯವಿಲ್ಲ-ಎಂ.ಬಿ ಪಾಟೀಲ

M.B patil reaction on supreme court verdict on cavuray issue

03-05-2018

ವಿಜಯಪುರ: ತಮಿಳುನಾಡಿಗೆ 4ಟಿಎಂಸಿ ನೀರುಬಿಡುಗಡೆ ಮಾಡಿ ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆ, ಈ ಕುರಿತು ಪ್ರತಿಕ್ರಿಯಿಸಿದ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ ಕಾವೇರಿ ಕಣಿವೆಯಲ್ಲಿ 4 ಆಣೆಕಟ್ಟುಗಳಿವೆ, ಎಲ್ಲ ಆಣೆಕಟ್ಟುಗಳಲ್ಲಿರುವ ನೀರಿನ ಒಟ್ಟು ಸಂಗ್ರಹಣವೇ 9ಟಿಎಂಸಿ ನೀರಿದೆ. ಆ ನೀರು ನಮಗೆ ಕುಡಿಯಲು ಸಾಕಾಗುವುದಿಲ್ಲ. ಜೊತೆಗೆ ಬೆಳೆಗಳಿಗೂ ಕೊರತೆ ಆಗಲಿದೆ. ಆದರೆ ಇಂಥಹ ಸ್ಥಿತಿಯಲ್ಲಿ ಸುಪ್ರೀಂ ಕೋರ್ಟ ಏನು ಆದೇಶ ನೀಡಿದೆ ಅದನ್ನು ಪಾಲನೆ ಮಾಡಲು ನಮಗೆ ಆಗುವುದಿಲ್ಲ, ಕಾರಣ ನಮ್ಮ ಬಳಿ ಅಷ್ಟೊಂದು ನೀರಿಲ್ಲ, ಹೀಗಾಗಿ ನಾವು ಈ ಕುರಿತು ಸುಪ್ರೀಂ ಕೋರ್ಟಗೆ 13ನೇ ತಾರೀಖಿನಂದು ತಿಳಿಸಿಕೊಡಲಿದ್ದೇವೆ ಎಂದು ಹೇಳಿದ್ದಾರೆ.

ನಮ್ಮ ಬಳಿ ಎಷ್ಟು ನೀರು ಇದೆ ಎಂಬುದನ್ನು, ವಾಸ್ತವಿಕ ಅಂಶಗಳನ್ನು ಸುಪ್ರೀಂ ಕೋರ್ಟ್ ಎದುರು ಇಡಲಿದ್ದೇವೆ. ಯಾವುದೇ ಕಾರಣಕ್ಕೂ ಕೂಡ ನಾವು ತಮಿಳುನಾಡಿಗೆ ನೀರು ಕೊಡಬೇಕೆಂದರೂ ನಮ್ಮ ಬಳಿ ಅಷ್ಟು ನೀರೇ ಇಲ್ಲ, ನಮಗೇ ಕೊರತೆ ಇದೆ. ವಾಟರ್ ಪೀರಿಯಡ್ ಕೂಡ ಡಿಸೆಂಬರ್ ಗೆ ಮುಗಿದು ಹೋಗುತ್ತದೆ.

ಆದರೆ ಏತನ್ಮಧ್ಯೆ ಯಾಕೆ ಕೋರ್ಟ್ ಇಂಥಹ ತೀರ್ಪು ನೀಡಿದೆ ಎಂಬುದು ಗೊತ್ತಾಗುತ್ತಿಲ್ಲ, ನಾನು ಕಾನೂನು ತಜ್ಞರಿಗು ಕೂಡ ತೀರ್ಪಿನ ವಿಚಾರವಾಗಿ ನಿರ್ದೇಶನ ನೀಡಿದ್ದೇನೆ. ನಮ್ಮ ಕಾನೂನು ತಜ್ಞರಿಂದ ಸುಪ್ರೀಂ ಕೋರ್ಟಿಗೆ ಮನವರಿಕೆ ಮಾಡಿಕೊಡಲಿದ್ದೇವೆ. ಸುಪ್ರೀಂ ಕೋರ್ಟ್ ನ ತೀರ್ಪನ್ನು ಪಾಲಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ