ಅಪಘಾತ: ಬಂಗಾರಪೇಟೆ ತಹಶೀಲ್ದಾರ ಸಾವು

Accident: bangarpet tasidhar died

03-05-2018

ಬೆಂಗಳೂರು: ವೇಗವಾಗಿ ಕಾರು ಚಲಾಯಿಸಿಕೊಂಡು ಬರುತ್ತಿದ್ದ ಬಂಗಾರಪೇಟೆ ತಹಶೀಲ್ದಾರ ಸತ್ಯಪ್ರಕಾಶ್ ಅವರು ಹೆಬ್ಬಾಳದ ದೇವಿ ನಗರದ ಬಳಿ ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಮತ್ತಿಕೆರೆಯ ಸತ್ಯಪ್ರಕಾಶ್ (43) ಅವರು ತಡರಾತ್ರಿಯವರೆಗೆ ಕೆಲಸ ಮುಗಿಸಿಕೊಂಡು ಕೋಲಾರದಿಂದ ಇಂದು ಮುಂಜಾನೆ 4ರ ವೇಳೆ ಮತ್ತಿಕೆರೆಯ ಮನೆಗೆ ಸ್ಕೋಡಾ ಕಾರಿನಲ್ಲಿ ವೇಗವಾಗಿ ವಾಪಸ್ಸಾಗುತ್ತಿದ್ದರು. ಮಾರ್ಗ ಮಧ್ಯೆ ದೇವಿ ನಗರ ಕ್ರಾಸ್ ಬಳಿ ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರು ಚಲಾಯಿಸುತ್ತಿದ್ದ ಸತ್ಯಪ್ರಕಾಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪ್ರಕರಣ ದಾಖಲಿಸಿರುವ ಹೆಬ್ಬಾಳ ಸಂಚಾರ ಪೊಲೀಸ್ ಇನ್ಸ್ಪೆಕ್ಟರ್ ಪ್ರವೀಣ್ ಕುಮಾರ್ ಅವರು ಪ್ರಕರಣ ದಾಖಲಿಸಿ ಲಾರಿ ಚಾಲಕನಿಗಾಗಿ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಸಾರಾ ಫಾತಿಮಾ ತಿಳಿಸಿದ್ದಾರೆ. ಮೃತ ಸತ್ಯಪ್ರಕಾಶ್ ಮನೆ ಕಚೇರಿಯ ಮೇಲೆ ಇತ್ತೀಚಿಗೆ ಅಕ್ರಮ ಆಸ್ತಿ ಗಳಿಕೆ ಸಂಬಂಧ ಭ್ರಷ್ಟಾಚಾರ ನಿಗ್ರಹ(ಎಸಿಬಿ)ದಳದ ಅಧಿಕಾರಿಗಳ ದಾಳಿ ನಡೆಸಿದ್ದರು.

 


ಸಂಬಂಧಿತ ಟ್ಯಾಗ್ಗಳು

tahsildar Accident ಅಕ್ರಮ ಆಸ್ತಿ ಎಸಿಬಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ