ಸಿದ್ದು ಸರ್ಕಾರವನ್ನು ಟೀಕೆ ಮಾಡಿದ ಯೋಗಿ

yogi aditya nanda criticized siddu government

03-05-2018

ಶಿವಮೊಗ್ಗ: ಉತ್ತರ ಪ್ರದೇಶ ಹಾಗೂ ಕರ್ನಾಟಕದ ಸಂಬಂಧ ಹಳೆಯದು, ರಾಹುಲ್ ಗಾಂಧಿಗೆ ಭಾರತಕ್ಕಿಂತ ಇಟಲಿಯ ಜೊತೆ ಸಂಬಂಧ ಹೆಚ್ಚಾಗಿದೆ ಎಂದು, ಶಿವಮೊಗ್ಗದ ಸಾಗರದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಗೋರಕ್ ಮಂಜುನಾಥ್ ಹಾಗೂ ಧರ್ಮಸ್ಥಳ ಮಂಜುನಾಥ ಇಬ್ಬರು ಒಂದೇ. ಭಾರತದ ಪರಂಪರೆ ಗೊತ್ತಿದ್ದರೆ ಕಾಗೋಡು ತಿಮ್ಮಪ್ಪ ಗೋಮಾಂಸ ತಿನ್ನುತ್ತೇನೆ ಮತ್ತು ಬೇರೆ ಅವರಿಗೆ ತಿನ್ನುವಂತೆ ಪ್ರೇರಣೆ ನೀಡುತ್ತಿರಲಿಲ್ಲ. ಕರ್ನಾಟಕ ಭೂಮಿ ಇಷ್ಟು ಸಮೃದ್ಧಿಯಾಗಿರಲು ಇಲ್ಲಿನ ಜನ ಗೋರಕ್ಷಣೆ ಹಾಗೂ ಗೋಪೂಜೆ ಮಾಡುತ್ತಿದ್ದಾರೆ.

ಕಾಂಗ್ರೆಸ್ ಮುಕ್ತ ಕರ್ನಾಟಕ ಇಂದಿನ ತುರ್ತು ಅಗತ್ಯವಾಗಿದೆ. ಜಿಹಾದಿಗಳಿಂದ ರಕ್ಷಣೆ ಬೇಕಾದರೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಬೇಕಿದೆ. ಸರ್ಕಾರದ ಸೂಕ್ತ ಸ್ಪಂದನೆ ಇಲ್ಲದೆ ಮೂರು ಸಾವಿರಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿದ್ಧರಾಮಯ್ಯ ಸರ್ಕಾರ ರೈತ ವಿರೋಧಿ ಸರ್ಕಾರ ಎಂದು ಟೀಕಿಸಿದರು.

ಕರ್ನಾಟಕದಲ್ಲಿ ಜನರು ಸುರಕ್ಷಿತವಾಗಿಲ್ಲ, ಕೇವಲ ಅವರಿಗೆ ಅಧಿಕಾರ ಉಳಿಸಿಕೊಳ್ಳುವುದೇ ದೊಡ್ಡ ಕೆಲಸವಾಗಿದೆ. ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಅವರನ್ನು ಎಟಿಎಂ ಮಾಡಿಕೊಂಡು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿತ್ತು. ಆದರೆ ಈಗ ಯಾಕೆ ಅಭಿವೃದ್ಧಿಯಾಗುತ್ತಿಲ್ಲ ಎಂದು ಪ್ರಶ್ನಿಸಿದ ಯೋಗಿ, ಕರ್ನಾಟಕದಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಪ್ರಚಾರ ಸಭೆಯಲ್ಲಿ ಮನವಿಮಾಡಿಕೊಂಡರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ