ಲೋಕಾಯುಕ್ತ ಕಚೇರಿ: ಮಹಿಳೆ ಬಳಿ ಚಾಕು ಪತ್ತೆ

Lokayukta office: woman found knife near

03-05-2018

ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕುವಿನಿಂದ ಇರಿದ ಕೃತ್ಯ ಮಾಸುವ ಮುನ್ನವೇ ಇಂದು ಮಧ್ಯಾಹ್ನ ಬ್ಯಾಗ್‍ನಲ್ಲಿ ಚಾಕು ಇಟ್ಟುಕೊಂಡು ಲೋಕಾಯುಕ್ತ ಕಚೇರಿಗೆ ಬಂದಿದ್ದ ಮಹಿಳೆಯೊಬ್ಬರು ಪತ್ತೆಯಾಗಿ ಕೆಲ ಕಾಲ ಆತಂಕ ಸೃಷ್ಠಿಯಾಗಿದ್ದು ಮಹಿಳೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಅಂಬೇಡ್ಕರ್ ವೀದಿಯಲ್ಲಿರುವ ಲೋಕಾಯುಕ್ತ ಕಚೇರಿಯಲ್ಲಿರುವ ವಿಚಾರಣಾಧಿಕಾರಿ ಅಧಿಕಾರಿಯನ್ನು ಭೇಟಿ ಮಾಡಲು ಬಂದಿದ್ದ ಮಹಿಳೆಯ ಬ್ಯಾಗ್‍ನಲ್ಲಿದ್ದ ಫೈಲ್‍ಗಳ ನಡುವೆ ಚಾಕು ಇರುವುದು ಲೋಹ ನಿರೋಧಕರ ಯಂತ್ರದ ತಪಾಸಣೆ ವೇಳೆ ಪತ್ತೆಯಾಗಿದೆ.

ಮಹಿಳೆಯು ತಪಾಸಣಾ ಯಂತ್ರದಲ್ಲಿ ಹೋಗುತ್ತಿದ್ದಂತೆ ಶಬ್ಧ ಬಂದಾಗ ಭದ್ರತಾ ಸಿಬ್ಬಂದಿಗಳು ತಕ್ಷಣ ಎಚ್ಚೆತ್ತುಕೊಂಡಿದ್ದಾರೆ. ಆಕೆಯನ್ನು ತಪಾಸಣೆ ನಡೆಸಿದಾಗ ಬ್ಯಾಗ್‍ನಲ್ಲಿದ್ದ ಫೈಲ್‍ನಲ್ಲಿ ಚಾಕು ಇರುವುದು ಪತ್ತೆಯಾಗಿದ್ದು, ಕೂಡಲೇ ಆಕೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಈಕೆ ಹಾಜರಾತಿ ಪುಸ್ತಕದಲ್ಲಿ ವಿಜಯನಗರದ ನಿವಾಸಿ ಸೋನಿಯಾ ಹಾಗೂ ನನ್ನ ಪತಿ ರಾಜೀವ್‍ಗಾಂಧಿ ಎಂದು ಬರೆದಿದ್ದಾಳೆ. ಈ ಮಹಿಳೆ ಲೋಕಾಯುಕ್ತರಿಗೆ 5 ದೂರುಗಳನ್ನು ಸಲ್ಲಿಸಿದ್ದರು. ಈ ಎಲ್ಲ ದೂರುಗಳ ತನಿಖೆ ನಡೆಸಿ ಇತ್ಯರ್ಥ ಪಡಿಸಲಾಗಿತ್ತು. ಆದರೂ ಈ ಮಹಿಳೆ ತನ್ನ ದೂರುಗಳು ಏನಾದವು ಎಂಬ ಬಗ್ಗೆ ಮಾಹಿತಿಯನ್ನು ಪಡೆಯಲು ಲೋಕಾಯುಕ್ತ ಕಚೇರಿಗೆ ಆಗಮಿಸಿದ್ದಳು ಎಂದು ಹೇಳಲಾಗಿದೆ.


ಸಂಬಂಧಿತ ಟ್ಯಾಗ್ಗಳು

lokayukta scaning ಹಾಜರಾತಿ ಮಹಿಳೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ