ಮತ್ತೊಂದು ಚಿಟ್ ಫಂಡ್‍ ಕಂಪನಿಯಿಂದ ದೋಖಾ

fraud chit company: huge money loss to customers

03-05-2018

ಬೆಂಗಳೂರು: ಹೆಚ್ಚಿನ ಬಡ್ಡಿ ಕೊಡುವುದಾಗಿ ನಂಬಿಸಿ ತಮಿಳುನಾಡು ಮೂಲದ ಚಿಟ್‍ಫಂಡ್ ಕಂಪನಿಯೊಂದು ನೂರಾರು ಗ್ರಾಹಕರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿ ಕಚೇರಿಗಳಿಗೆ ಬೀಗ ಜಡಿದುಕೊಂಡು ಪರಾರಿಯಾಗಿರುವ ಕೃತ್ಯ ಬೆಳಕಿಗೆ ಬಂದಿದೆ.

ತ್ರಿಪುರಾ ಚಿಟ್ ಫಂಡ್‍ನಿಂದ ಐದು ತಿಂಗಳು ಗ್ರಾಹಕರಿಂದ ಹಣವನ್ನು ಕಟ್ಟಿಸಿಕೊಂಡು ರಾಜ್ಯದ 13 ಶಾಖೆಗಳನ್ನು ಮುಚ್ಚಿದೆ. ಇದರಿಂದ ಮೋಸ ಹೋದ ಗ್ರಾಹಕರು, ಸಿಐಡಿ ಆರ್ಥಿಕ ಅಪರಾಧಗಳ ವಿಭಾಗದ ಅಧಿಕಾರಿಗಳ ಸಲಹೆ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರತಿ ತಿಂಗಳು ಗ್ರಾಹಕರ ಮನೆಗೆ ಹೋಗಿ ಚಿಟ್‍ಫಂಡ್ ಸಿಬ್ಬಂದಿ ಹಣ ಪಡೆಯತ್ತಿದ್ದು ಮೊದಲಿಗೆ ಹಣ ಕಟ್ಟಿದ ಜನರಿಗೆ ಕಟ್ಟಿದ ಹಣಕ್ಕೆ ಮೂರು-ನಾಲ್ಕು ಬಾರಿ ಹಣ ಮರು ಪಾವತಿಸಿ ಗ್ರಾಹಕರ ನಂಬಿಕೆಗೆ ಪಾತ್ರರಾಗಿದ್ದರೆ. ಆಗ ಜನರು ನಂಬಿ ದುಪ್ಪಟ್ಟು ಹಣ ಹೂಡಲು ಮಾಡಲು ಮುಂದಾಗಿದ್ದಾರೆ.

ಇಲ್ಲಿಯವರೆಗೆ ತ್ರಿಪುರ ಚಿಟ್‍ಫಂಡ್ ಕಂಪನಿಯಲ್ಲಿ 20 ಸಾವಿರಕ್ಕೂ ಹೆಚ್ಚು ಗ್ರಾಹಕರು ಹಣ ತೊಡಗಿಸಿದ್ದರು. ಕಂಪನಿ ನಿಯಮದ ಪ್ರಕಾರ ಗ್ರಾಹಕರು ಅವರ ಸಾಮರ್ಥ್ಯದ ಮೇಲೆ 20 ತಿಂಗಳು ಹಣ ಕಟ್ಟಬೇಕಿತ್ತು. ಇಪ್ಪತ್ತು ತಿಂಗಳಿನಲ್ಲಿ 5 ತಿಂಗಳು ಹಣವನ್ನು ಕಟ್ಟಿದರೆ ನಂತರ ಆಯಾ ವ್ಯಕ್ತಿಯ ಸಾಮರ್ಥ್ಯಕ್ಕೆ ತಕ್ಕಂತೆ ಸಾಲವನ್ನು ನೀಡಲಾಗುತ್ತದೆ ಎಂದಿದ್ದ ಚಿಟ್‍ಫಂಡ್ ಉದ್ಯೋಗಿಗಳು ಯಾವುದೇ ಸಾಲ ನೀಡದೇ ಪರಾರಿಯಾಗಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂ, ಬಾಣಸವಾಡಿ, ದಾಸರಹಳ್ಳಿ, ಎಲೆಕ್ಟ್ರಾನಿಕ್ ಸಿಟಿ ಸೇರಿ 10ಕ್ಕೂ ಹೆಚ್ಚು ಕಡೆಗಳಲ್ಲಿ ಶಾಖೆಗಳಿದ್ದವು. ಆರು ತಿಂಗಳಲ್ಲಿ ನೀವು ಹಾಕುವ ಹಣಕ್ಕೆ ದುಪ್ಪಟ್ಟು ಹಣ ಕೊಡುವುದಾಗಿ ನಂಬಿಸಿ ಸಾರ್ವಜನಿಕರನ್ನು ಮೊಸ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿದೆ.

 


ಸಂಬಂಧಿತ ಟ್ಯಾಗ್ಗಳು

chit fund customers ಸಾರ್ವಜನಿಕ ನಂಬಿಕೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ