ಭ್ರಷ್ಟರಿಗೆ ಮೋದಿ ಬೆಂಬಲ: ರಾಹುಲ್ ಗಾಂಧಿ

Modi

03-05-2018

ಬೆಂಗಳೂರು: ಕರ್ನಾಟಕದಲ್ಲಿ ಅಭಿವೃದ್ದಿ ಸಾಕಷ್ಟು ಆಗಿದೆ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿಗೆ ಮಾತಾಡಲಿಕ್ಕೆ ಎನೂ ಇಲ್ಲ. ನನ್ನ ಬಗ್ಗೆ ಮಾತನಾಡುತ್ತಾರೆ. ಇದು ಅವರಿಗೆ ಶೋಭೆ ತರುವಂಥದ್ದಲ್ಲ. ಪ್ರಧಾನಿ ಹುದ್ದೆಗೂ ಶೋಭೆ ತರೋಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಬೀದರ್ ಜಿಲ್ಲೆಯ ಔರಾದ್ ನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ರಾಜ್ಯದಲ್ಲಿ ಭ್ರಷ್ಟರನ್ನು ವಿಧಾನಸೌಧ ನುಗ್ಗಿಸುವ ಪ್ರಯತ್ನ ಮಾಡ್ತಿದ್ದಿರಾ? ಎಂದು ಪ್ರಶ್ನಿಸಿದರು. ಶೋಲೆ ಸಿನಿಮಾದ ಕುರಿತು ಲೇವಡಿ ಮಾಡಿದ ರಾಹುಲ್ ಗಾಂಧಿ, ಗಬ್ಬರ್, ಸಾಂಬಾ ಸೇರಿದಂತೆ ಎಲ್ಲರೂ ಈ ಚುನಾವಣೆಯಲ್ಲಿ ಇದ್ದಾರೆ ಎಂದು ಬಳ್ಳಾರಿ ರೆಡ್ಡಿ ಸಹೋದರರು ಹಾಗು ಶ್ರೀರಾಮುಲು ಅವರನ್ನು ಉದಾಹರಿಸಿದರು. ನನ್ನ ಪ್ರಶ್ನೆಗೆ ಉತ್ತರ ನೀಡಿ ಎಂದು ಒತ್ತಾಯಿಸಿದ ರಾಹುಲ್, ಪ್ರಧಾನಿಗೆ ನುಡಿದಂತೆ ನಡೆಯಬೇಕು ಎಂದು ಕವಿ ಮಾತು ಹೇಳಿದರು.

ಜನರಿಗೆ ನೀಡಿದ ಭರವಸೆಗಳು ಈಡೇರಿಸಿದ್ದಿರಾ? ಅವುಗಳನ್ನು ಈಡೇರಿಸಿ ಎಂದು ಆಗ್ರಹಿಸಿದರು. ಅಮಿತ್ ಷಾ ಮಗ ಕೋಟಿ ಕೋಟಿ ಲೂಟಿ ಮಾಡಿದ. ನಿಮ್ಮ ಗೆಳೆಯ ಅಮಿಶ್ ಷಾ ಅವರ ಮಗನ ಅಕ್ರಮ ಬಗ್ಗೆ ಯಾಕೆ ಮಾತನಾಡುವುದಿಲ್ಲ ಎಂದು ಖಾರಾವಾಗಿ ರಾಹುಲ್ ಗಾಂಧಿ ಪ್ರಶ್ನಿಸಿದರು.

ನರೇಂದ್ರ ಮೋದಿ, ನನ್ನ ಬಗ್ಗೆ ಏನೇ ಹೇಳಿಕೆ ನೀಡಿದರೂ ಕೂಡ ನಾನು ತಲೆ ಕೆಡಿಸುಕೊಳ್ಳುವುದಿಲ್ಲ. ನಾನು, ಭಾರತೀಯ. ನಮ್ಮ ದೇಶದ ಪ್ರಧಾನಿ ಅವರು. ಅವರನ್ನು ಪ್ರಶ್ನೆ ಮಾಡುವುದು ನನ್ನ ಹಕ್ಕು ಅದಕ್ಕೆ ಕೇಳುತ್ತೇನೆ. ಭ್ರಷ್ಟಾಚಾರ ಬಗ್ಗೆ ಮಾತನಾಡುವ ಮೋದಿ ಅವರೇ, ಭ್ರಷ್ಟಾಚಾರ ಮಾಡಿದ ಬಿ.ಎಸ್ ಯಡಿಯೂರಪ್ಪ ಅವರನ್ನು ಯಾಕೆ ಮುಖ್ಯಮಂತ್ರಿ ಮಾಡಿದಿರಿ. ಭ್ರಷ್ಟಾಚಾರ, ಲೂಟಿ ಮಾಡಿ ಜೈಲಿಗೆ ಹೋಗಿ ಬಂದವರು ನಿಮ್ಮ ಅಕ್ಕ ಪಕ್ಕದ ವೇದಿಕೆಯಲ್ಲಿ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೇ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, 371(ಜೆ) ಕಲಂ ಜಾರಿಯನ್ನು ಬಿಜೆಪಿ ಅವರು ವಿರೋಧಿಸಿದ್ದರು .ಅದೇ, ಎಲ್. ಕೆ ಅಡ್ವಾಣಿ ಕೂಡ 371(ಜೆ)ಕಲಂ ತಿರಸ್ಕಾರ ಮಾಡಿದ್ದರು. ಕೊನೆಗೂ, ನಾವು ಈ 371(ಜೆ) ಕಲಂ ಜಾರಿಗೆ ತಂದಿದ್ದೇವೆ ಎಂದು ಹೇಳಿದರು. ನಮ್ಮ ಸಿದ್ದರಾಮಯ್ಯ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ. ಆದರೆ, ಕೇಂದ್ರದ ಬಿಜೆಪಿ ಸರ್ಕಾರ ಕೊಟ್ಟ ಭರವಸೆಗಳ ಪೈಕಿ ಒಂದು ಈಡೇರಿಸಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.


ಸಂಬಂಧಿತ ಟ್ಯಾಗ್ಗಳು

Rahul Gandhi Narendra Modi ವೇದಿಕೆ ಭ್ರಷ್ಟಾಚಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ