ಜಿಲ್ಲಾಧ್ಯಕ್ಷನ ವಿರುದ್ಧ ತಿಪ್ಪೇಸ್ವಾಮಿ ಹೊಸ ಬಾಂಬ್!

MLA Thippeswamy serious allegation on BJP district president

03-05-2018

ಚಿತ್ರದುರ್ಗ: ಮೊಳಕಾಲ್ಮೂರು ಹಾಲಿ ಶಾಸಕ ತಿಪ್ಪೇಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಮೊಳಕಾಲ್ಮೂರು ಮತ ಕ್ಷೇತ್ರದ ಟಿಕೆಟ್ ವಂಚಿತ ತಿಪ್ಪೇಸ್ವಾಮಿಯನ್ನು ನಿನ್ನೆಯಷ್ಟೇ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಇದರ ಬೆನ್ನಲ್ಲೇ ಬಿಜೆಪಿ ಜಿಲ್ಲಾಧ್ಯಕ್ಷರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪರಿವರ್ತನಾ ಯಾತ್ರೆಗೆ ಬಿಜೆಪಿ ಜಿಲ್ಲಾ ಅಧ್ಯಕ್ಷ ನವೀನ್ 25ಲಕ್ಷ ಡಿಮ್ಯಾಂಡ್ ಮಾಡಿದ್ದರು. ನಾನು 10ಲಕ್ಷ ಕೊಟ್ಟು ಸಹಕರಿಸಿದ್ದೆ ಎಂದು ಹೇಳಿಕೆ ನೀಡಿದ್ದಾರೆ.

ಎಲ್ಲಾ ಕೊಟ್ಟಿದ್ದರು ಜಿಲ್ಲಾ ಅಧ್ಯಕ್ಷ ನವೀನ್ ಟಿಕೆಟ್ ನೀಡುವ ಸಮಯದಲ್ಲಿ ಸಹಕರಿಸಲಿಲ್ಲ ಎಂದು ದೂರಿದ್ದಾರೆ. ಪಕ್ಷ ಸಂಘಟನೆಗೆ ತಾನು 4-5 ಕೋಟಿ ಖರ್ಚು ಮಾಡಿದ್ದೇನೆ ಎಂದು ಹೇಳಿರುವ ತಿಪ್ಪೇಸ್ವಾಮಿ, ಪಕ್ಷದ ವಿವಿಧ ಕಾರ್ಯಗಳಿಗೆ ಮೊಳಕಾಲ್ಮೂರಿಂದ ಬಸ್ ಗಳಲ್ಲಿ ಜನರನ್ನು ಕಳುಹಿಸಿದ್ದೆ. ಬಿಜೆಪಿ ಜಿಲ್ಲಾ ಅಧ್ಯಕ್ಷ ನನಗೆ ಮೋಸ ಮಾಡಿದ್ದಾರೆಂದು ಆರೋಪಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Thippeswamy demand ಪರಿವರ್ತನಾ ಯಾತ್ರೆ ಗಂಭೀರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ