ಜೆಡಿಎಸ್ ವರಿಷ್ಠರಿಗೆ ಚಲುವರಾಯಸ್ವಾಮಿ ಟಾಂಗ್

N Chaluvaraya Swamy v/s jds

03-05-2018

ಮಂಡ್ಯ: ಬಿಜೆಪಿ ಜೊತೆಗೆ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ. ಹಾಗೇನಾದರೂ ಕುಮಾರ ಸ್ವಾಮಿ ಮೈತ್ರಿಗೆ ಮುಂದಾದರೆ ಮಗನನ್ನು ಬಹಿಷ್ಕರಿಸುವುದಾಗಿ ಹೇಳಿಕೆ ನೀಡಿರುವ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರರಿಗೆ, ಜೆಡಿಎಸ್ ನಿಂದ ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿರುವ ಎನ್.ಚಲುವರಾಯಸ್ವಾಮಿ ಟಾಂಗ್ ನೀಡಿದ್ದಾರೆ. ತನ್ನ ಮಗನಿಗೆ ಕಾವೇರಿ ಸ್ನಾನ ಮಾಡಿಸಿ ಒಳಗೆ ಸೇರಿಸಿಕೊಂಡಿದ್ದರೆ ಒಪ್ಪಬಹುದಿತ್ತು. ಅಂದೇ ಜೊತೆಗೂಡಿ ಅಧಿಕಾರ ನಡೆಸಿದ ಅವರು ಈಗ ಮನೆಗೆ ಸೇರಿಸೋದಿಲ್ಲ ಎನ್ನುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಹೆಚ್.ಡಿ.ರೇವಣ್ಣರನ್ನೂ ಸಂಪುಟಕ್ಕೆ ಸೇರಿಸಿದರು, ಅವರೂ ಮನೆಯಿಂದಲೇ ಅಧಿಕಾರ ಮಾಡಿದರು. ಕುಮಾರಸ್ವಾಮಿ ಸಿಎಂ ಆದಾಗ ದೇವೇಗೌಡರು ನನಗೂ ಬೈದಿದ್ದರು, 15 ದಿನದಲ್ಲೇ ಜೊತೆ ಆಗಲಿಲ್ವಾ? ರೇವಣ್ಣ ಮತ ಹಾಕದೇ ಇದ್ದರೂ ಮಂತ್ರಿ ಆಗಲಿಲ್ವ, ಅಂದೇ ದೇವೇಗೌಡರು 20 ತಿಂಗಳು ಮನೆಗೆ ಬರಬೇಡ, ಕಾವೇರಿ ನೀರಿನಲ್ಲಿ ಸ್ನಾನ ಮಾಡಿ ಬಾ ಎಂದಿದ್ದರೆ ದೇವೇಗೌಡರು ಹೇಳೋದು ಸತ್ಯ ಎನ್ನಬಹುದಿತ್ತು. ಆದರೆ, ಈಗ ಮನೆಗೆ ಸೇರಿಸಲಿಲ್ಲ ಅಂತಿದ್ದಾರೆ. ಆದರೆ ಅವತ್ತು ಮಗನನ್ನು ಅದೇ ಸಂಪುಟಕ್ಕೆ ಸೇರಿಸಿ ಅಧಿಕಾರ ಮಾಡಲಿಲ್ವ? ಇದನ್ನ ಇಲ್ಲ ಅಂತ ಹೇಳಲಿ ನೋಡೋಣ ಎಂದಿದ್ದಾರೆ.

ಚುನಾವಣೆಯಲ್ಲಿ ಮಾತ್ರ ಈ ರೀತಿಯಾಗಿ ದೇವೇಗೌಡರು ಹೇಳುತ್ತಾರೆ. 'ಬಿಜೆಪಿ-ಜೆಡಿಎಸ್ ಒಂದೇ ನಾಣ್ಯದ ಎರಡು ಮುಖ ಇದ್ದ ಹಾಗೆ. ಅದರಲ್ಲಿ ಮುಚ್ಚು ಮರೆ ಇಲ್ಲ'. 'ಅಮಿತ್ ಷಾ-ಕುಮಾರಸ್ವಾಮಿ ರಹಸ್ಯ ಭೇಟಿ ನಿಜ' ಎಂದಿದ್ದಾರೆ ಚಲುವರಾಯಸ್ವಾಮಿ.


ಸಂಬಂಧಿತ ಟ್ಯಾಗ್ಗಳು

N. Chaluvaraya Swamy H.D.Kumaraswamy ಸಂಪುಟ ಕಾವೇರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ