ಗದಗ-ಬೆಟಗೇರಿಯಲ್ಲಿ ‘ಬದಲಾವಣೆಗಾಗಿ ಓಟ’

BJP campaign:

03-05-2018

ಗದಗ: ಇದೇ ತಿಂಗಳ 12ರಂದು ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯಾದ್ಯಂತ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಗದಗ-ಬೆಟಗೇರಿ ಅವಳಿ ನಗರದ 35 ವಾರ್ಡ್ಗಳಲ್ಲಿ ಬಿಜೆಪಿ ಪಕ್ಷದಿಂದ ವಿಶಿಷ್ಟ ರೀತಿಯಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಬೃಹತ್ ಮ್ಯಾರಥಾನ್ ಮಾಡುವ ಮೂಲಕ ಪ್ರಚಾರ ಕಾರ್ಯ ಹಮ್ಮಿಕೊಂಡಿದ್ದಾರೆ. ಗದಗ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ನೇತೃತ್ವದಲ್ಲಿ "ಬದಲಾವಣೆಗಾಗಿ ಓಟ" ಎಂಬ ಹೆಸರಿನಡಿ ಹುಡ್ಕೋ ಬಡಾವಣೆಯ ಬೈಲಾಂಜನೇಯ ದೇವಸ್ಥಾನದಿಂದ "ರನ್ ಫಾರ್ ಡೆವಲಪ್ಮೆಂಟ್", ರನ್ ಫಾರ್ ಗದಗ್ ಚೇಂಜ್" ಎಂಬ ಘೋಷವಾಕ್ಯಗಳನ್ನು ಹೊತ್ತ ನೂರಾರು ಬಿಜೆಪಿ ಕಾರ್ಯಕರ್ತರು ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದರು.


ಸಂಬಂಧಿತ ಟ್ಯಾಗ್ಗಳು

Marathon vote ಗದಗ-ಬೆಟಗೇರಿ ಪ್ರಚಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ