‘ಅಬ್ಬರ,ಅಪಪ್ರಚಾರದಿಂದ ಗೆಲ್ಲಲು ಸಾಧ್ಯವಿಲ್ಲ’

02-05-2018
ಮಂಡ್ಯ: ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ದೇವೇಗೌಡರ ಹತ್ತಿರ ಯಾವ ಯಾವ ಟಿಕೆಟ್ ಇವೆಯೋ ಗೊತ್ತಿಲ್ಲ, ಸಿದ್ದರಾಮಯ್ಯನವರ ಹತ್ತಿರ ಇರೋದು ಬಡವರ ಟಿಕೆಟ್, ಬಡವರ ಪರವಾದ ಅಭಿವೃದ್ಧಿ ಟಿಕೆಟ್, ರಾಜ್ಯವನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುವ ಟಿಕೆಟ್ ಎಂದು ಹೇಳಿದ್ದಾರೆ. ಕರ್ನಾಟಕ ಶಾಂತಿಯಿಂದ ಇದೆ. ಒಬ್ಬ ಸಿದ್ದರಾಮಯ್ಯನವರ ಮೇಲೆ ಇಷ್ಟು ಜನ ದಾಳಿ ಮಾಡುತ್ತಿದ್ದಾರೆ, ಕರ್ನಾಟಕದ ಜನ ಅವರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದರು.
ಕುಮಾರ ಪರ್ವ ಅವರ ಪರ್ವ, ಅದು ರಾಜ್ಯದ ಪರ್ವ ಅಲ್ಲ. ಅಬ್ಬರದಿಂದ, ಅಪಪ್ರಚಾರದಿಂದ ರಾಜಕಾರಣವನ್ನು ತೆಕ್ಕೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ, ಸೇವೆಯಿಂದ ಮಾತ್ರ ಸಾಧ್ಯ. ಸಿದ್ದರಾಮಯ್ಯನವರ ಸಾಧನೆ ಮುಂದೆ ಇವು ಯಾವುದೂ ಇಲ್ಲ ಎಂದು ಪ್ರಚಾರದ ವೇಳೆ ಹೇಳಿದ್ದಾರೆ.
ಒಂದು ಕಮೆಂಟನ್ನು ಹಾಕಿ