ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮ ಹತ್ಯೆ

Kannada News

22-05-2017 224

ಮೈಸೂರು: ತಂದೆಯ ಮುಂದೆಯೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ  ಜೆಸಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿರುವ ರಾಮೇಗೌಡ ಎಂಬುವರ ಕಿರಿಯ ಪುತ್ರಿ ರಕ್ಷಿತಾ (19) ಮೃತ ದುರ್ದೈವಿ. ಈಕೆ ಚಾಮರಾಜನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಈ ವೇಳೆ ಪರಿಚಯವಾಗಿದ್ದ ಬಸ್ ಚಾಲಕ ಶ್ರೀನಿವಾಸ ಎಂಬಾತನನ್ನು ಪ್ರೀತಿಸಿ  ಪೋಷಕರಿಗೆ ತಿಳಿಸದೆ ವಿವಾಹವಾಗಿದ್ದಳು. ವಿಷಯ ಪೋಷಕರಿಗೆ ತಿಳಿದಾಗ ಚಾಮರಾಜನಗರ ಬಸ್ ಡಿಪೋ ಬಳಿ ಬೆಂಕಿ ಹಚ್ಚಿಕೊಂಡು ನಡುರಸ್ತೆಗೆ ಬಂದಿದ್ದಳು. ಆಗ ಸ್ಥಳದಲ್ಲಿದ್ದ ಸಾರ್ವಜನಿಕರು ಆಸ್ಪತ್ರೆಗೆ ಸೇರಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ