ವಾಟಾಳ್ ಪಕ್ಷದ ಪ್ರಣಾಳಿಕೆ ಬಿಡುಗಡೆ

vatal party released election manifesto

02-05-2018

ಬೆಂಗಳೂರು: ಕನ್ನಡ ಚಳವಳಿ ವಾಟಾಳ್ ಪಕ್ಷದ ಪ್ರಣಾಳಿಕೆಯನ್ನು ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಅವರ ಪುತ್ರಿ ಅನುಪಮಾ ಭಾಗಿಯಾಗಿದ್ದರು. ರಾಷ್ಟ್ರೀಯ ಪಕ್ಷಗಳು ದೆಹಲಿಯವರು. ನರೇಂದ್ರ ಮೋದಿ, ಅಮಿತ್ ಷಾ, ರಾಹುಲ್ ಗಾಂಧಿಗೆ ಕರ್ನಾಟಕದ ಬಗ್ಗೆ ಅರಿವಿಲ್ಲ. ಕರ್ನಾಟಕದಲ್ಲಿ ಕನ್ನಡದಲ್ಲಿ ಪ್ರಚಾರ ಮಾಡದೇ ಅವರವರ ಭಾಷೆಯಲ್ಲಿ‌ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಇಂತಹವರಿಂದ ಶಾಸನ ಸಭೆಯ ಗಾಂಭೀರ್ಯ ಕಡಿಮೆಯಾಗುತ್ತದೆ ಎಂದು ವಾಟಾಳ್ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದರು. ಈ ಬಾರೀ ಸಹ ಚಾಮರಾಜ ನಗರದಲ್ಲಿ ಗೆಲುವನ್ನು ಸಾಧಿಸುತ್ತೇನೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ವಾಟಾಳ್ ಪ್ರಣಾಳಿಕೆ ಹೈಲೈಟ್ಸ್ :

1.ಬಡ ಮತ್ತು ಮಧ್ಯಮ ವರ್ಗದವರಿಗೆ ಉಚಿತ ಹೇರ್ ಕಟ್, ಶೇವಿಂಗ್ ವ್ಯವಸ್ಥೆ.

2.ಚಾಮರಾಜನಗರದ ಸಮಗ್ರ ಅಭಿವೃದ್ಧಿಗೆ ಒತ್ತು.

3.ಕತ್ತೆಯನ್ನ ರಾಷ್ಟ್ರೀಯ ಪ್ರಾಣಿ ಎಂದು ಘೋಷಣೆ ಮಾಡಬೇಕು.

4.ಪ್ರೇಮಿಗಳ ದಿನಾಚರಣೆಗೆ ಸರ್ಕಾರಿ ರಜೆ ಘೋಷಣೆ ಮಾಡಬೇಕು.

5.ಕತ್ತೆಗಳ ಅಭಿವೃದ್ಧಿ ನಿಟ್ಟಿನಲ್ಲಿ ಅಭಿವೃದ್ಧಿ ಮಂಡಳಿ‌ ಸ್ಥಾಪನೆ.

6.ಕತ್ತೆ ಧರ್ಮ ದೇವತೆ, ಆದ್ದರಿಂದ ಕತ್ತೆಗೆ ಗೌರವ ನೀಡಬೇಕು.

7.ಪ್ರೇಮ ವಿವಾಹಕ್ಕೆ 50,000 ರೂಪಾಯಿ ಗೌರವ ಧನಸಹಾಯ ನೀಡಬೇಕು.

8.ಆಟೋ ರಿಕ್ಷಾದವರಿಗೆ ರೈನ್ ಕೋಟ್.

9.ಬೆಂಗಳೂರು ನಗರದಲ್ಲಿ ಕನಿಷ್ಠ 20 ಸಾವಿರ ಶೌಚಾಲಯ.

10. ಡಾ.ರಾಜ್ ಕುಮಾರ್, ಬೇಂದ್ರೆ, ಮಾಸ್ತಿ, ಗುಬ್ಬಿವೀರಣ್ಣ ಮುಂತಾದವರ ಪ್ರತಿಮೆ.

11.ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ.

12.ಕರ್ನಾಟಕದಲ್ಲಿ ಕನ್ನಡಿಗರಿಗೆ ಮಾತ್ರ ಉದ್ಯೋಗ.

13.ಉಚಿತ ಔಷಧಿ ವ್ಯವಸ್ಥೆ ಕಲ್ಯಾಣ ಮಂಟಪ.

14.ಬಡ ಹೆಣ್ಣುಮಕ್ಕಳ ಮದುವೆಗೆ 1ಲಕ್ಷ ಹಣ ನೀಡಬೇಕು.

ಪ್ರಧಾನಿ ನರೇಂದ್ರ ಮೋದಿ ಯಾಕೆ ಚಾಮರಾಜನಗರಕ್ಕೆ ಬಂದಿಲ್ಲ. ಅವರೂ ಮೂಢನಂಬಿಕೆಯನ್ನ ನಂಬಿ ಅಲ್ಲಿಗೆ ಬಂದಿಲ್ಲ ಎಂದು ವಾಟಾಳ್ ಟೀಕಿಸಿದರು. ಚಾಮರಾಜನಗರದಲ್ಲಿ‌ ಫೈಟ್ ಇರೋದು ನನಗೆ ಮತ್ತು ಪ್ರಧಾನಿ‌ ಮೋದಿ ನಡುವೆ. ಮೋದಿ‌ ಅಲ್ಲಿಗೆ ಬರಬೇಕಾಗಿತ್ತು, ಅದರೆ ಅವರು ಬರದೇ ಇದ್ದದ್ದು ಅಕ್ಷಮ್ಯ ಅಪರಾಧ. ಅದಕ್ಕಾಗಿ ಮೋದಿ ರಾಜ್ಯದ ಜನರ ಕ್ಷಮೆ ಕೇಳಬೇಕು. ಇಲ್ಲವಾದರೆ ಅವರ ವಿರುದ್ಧ ಕೋರ್ಟಿನಲ್ಲಿ ಕೇಸು ಹಾಕುತ್ತೇನೆ ಎಂದು ವಾಟಾಳ್ ನಾಗರಾಜ್ ಎಚ್ಚರಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ