20 ಸಾವಿರ ಬೆಲೆಬಾಳುವ ಬೀಟೆ ವಶ

Kannada News

22-05-2017

ಶಿರಸಿ:- ಅಕ್ರಮವಾಗಿ ಸಾಗಿಸುತ್ತಿದ್ದ ಬೀಟೆ ಮರದ ದಿಮ್ಮಿಗಳನ್ನು ಶಿರಸಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮುಟ್ಟಳ್ಳಿ ಗ್ರಾಮದ, ಉಬ್ಬಗೈ ನಿವಾಸಿ ಕಮಲಾಕರ ಹರಿಯಪ್ಪ ನಾಯ್ಕ ಅವರ ತೋಟದಲ್ಲಿ ಸುಮಾರು 20 ಸಾವಿರ ಬೆಲೆಬಾಳುವ ಬೀಟೆ ನಾಟ ಪತ್ತೆಯಾಗಿದೆ.  ಬೀಟೆ ಮರದ ದಿಮ್ಮಿಗಳನ್ನು ಸಾಗಿಸುತ್ತಿರುವ ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿ ಮಂಜುನಾಥ ಕೃಷ್ಣ ಗೌಡ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈ ವೇಳೆ ಕಮಲಾಕರ ನಾಯ್ಕ್ ಹಾಗೂ ಜಗದೀಶ್ ಹರಿಜನ ಪರಾರಿಯಾಗಿದ್ದಾರೆ. ಉಪ ವಲಯ ಅರಣ್ಯಾಧಿಕಾರಿ ಅಶೋಕ್  ಪೂಜಾರ್ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ.


ಸಂಬಂಧಿತ ಟ್ಯಾಗ್ಗಳು

ಬೀಟೆ ವಶ ಬೀಟೆ ವಶ ಬೀಟೆ ವಶ ಬೀಟೆ ವಶ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ