ಕೆರೆಗೆ ಹಾರಿ ತಾಯಿ-ಮಕ್ಕಳ ಆತ್ಮಹತ್ಯೆ

The mother and children committed suicide by jumping into the lake

30-04-2018

ಬೆಂಗಳೂರು: ಮಾಗಡಿ ತಾಲ್ಲೂಕಿನ ಕಲ್ಕೆರೆಯಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಇಬ್ಬರ ಮಕ್ಕಳ ಜೊತೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ದುರ್ದೈವಿಗಳನ್ನು ತಾವರೆಕೆರೆಯ ತಾಯಿ ಸುಜಾತ(26), ಮಕ್ಕಳಾದ ವಿಶಾಲ್(4) ಮತ್ತು ನಕುಲ್(6)ಎಂದು ಗುರುತಿಸಲಾಗಿದೆ. ಕಲ್ಕೆರೆಯ ಊರ ಹಬ್ಬಕ್ಕೆ ಬಂದಿದ್ದ ಸುಜಾತ ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಎಂಟು ವರ್ಷದ ಹಿಂದೆ ತಾವರೆಕೆರೆಯ ಅಂಜನಮೂರ್ತಿ ಎಂಬವರನ್ನ ಮೃತ ಸುಜಾತ ವಿವಾಹವಾಗಿದ್ದರು. ಬೆಂಗಳೂರು ದಕ್ಷಿಣ ತಾಲೂಕಿನ ಮುದ್ದಯ್ಯನಪಾಳ್ಯ ಗ್ರಾಮಕ್ಕೆ ವಾಪಸ್ ಹೋಗುವುದಾಗಿ ಹೇಳಿ ಹೋಗಿದ್ದ ತಾಯಿ ಸುಜಾತ ಮಕ್ಕಳ ಜೊತೆ ಆತ್ಮಹತ್ಯೆಗೆ ಶರಣಾಗಿದ್ದಾರೆ.  ಶವಗಳು ಕೆರೆಯಲ್ಲಿ ತೇಲುವಾಗ ಘಟನೆ ಬೆಳಕಿಗೆ ಬಂದಿದೆ. ಸುಜಾತರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಮಾಗಡಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

suicide police ಶವಗಳು ನಿಖರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ