ಮಳೆಯಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಗೋಪುರಕ್ಕೆ ಅಲ್ಪ ಪ್ರಮಾಣದ ಹಾನಿ

Kannada News

22-05-2017

ದಕ್ಷಿಣ ಕನ್ನಡ:-ಎರಡು ದಿನಗಳಿಂದ ಕುಕ್ಕೆ ಸುಬ್ರಹ್ಮಣ್ಯ ಆಸುಪಾಸಿನಲ್ಲಿ  ಸಿಡಿಲು,ಮಿಂಚು ಸಹಿತ ಮಳೆಯಾಗುತ್ತಿದ್ದು,  ಭಾನುವಾರ ಬೆಳಗ್ಗೆ ಸಿಡಿಲಿಗೆ ಕುಕ್ಕೆ ಸುಬ್ರ್ಮಹ್ಮಣ್ಯ ದೇವಸ್ಥಾನದ ಗೋಪುರಕ್ಕೆ ಅಲ್ಪ ಪ್ರಮಾಣದ ಹಾನಿಯಾಗಿದೆ. ಸಿಡಿಲಿನ ತೀವ್ರತೆಗೆ ಗೋಪುರದ ತುದಿಯ ಸಿಮೆಂಟ್ ತುಂಡು ಕಿತ್ತು ಹೋಗಿದೆ. ಈ ಭಾಗದಲ್ಲಿ ಏಕಕಾಲದಲ್ಲಿ ಅಪ್ಪಳಿಸಿದ ಸಿಡಿಲಿನ ತೀವ್ರತೆಗೆ ಈ ಘಟನೆ ನಡೆದಿದೆ. ರಾತ್ರಿ ವೇಳೆ ಹೆಚ್ಚಿನ ಮಳೆಯಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಸಿಡಿಲಿನ ಅಬ್ಬರ ಜೋರಾಗಿದೆ. ಹೀಗಾಗಿ ಭಾನುವಾರದ ಸಿಡಿಲಿಗೆ ಗೋಪುರಕ್ಕೆ ಹಾನಿಯಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ