ಕೇಂದ್ರ ಸರ್ಕಾರ ವಿರುದ್ಧ ಶಕೀಲ್ ಅಹ್ಮದ್ ಆರೋಪ

congress leader shakeel blamed central government

30-04-2018

ಹುಬ್ಬಳ್ಳಿ: ದೇಶದ ಆಂತರಿಕ ಹಾಗೂ ಗಡಿ ಭಾಗದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗು ಮಾಜಿ ಕೇಂದ್ರ ಸಚಿವ ಡಾ.ಶಕೀಲ್ ಅಹ್ಮದ್ ಆರೋಪಿಸಿದ್ದಾರೆ. ನೋಟು ಅಮಾನ್ಯೀಕರಣದಿಂದ ನಕ್ಸಲ್ ಹಾಗೂ ಭಯೋತ್ಪಾದಕ ಕೃತ್ಯಗಳು ಕಡಿಮೆ ಆಗುತ್ತವೆ ಎಂದು ಹೇಳಿದ್ದರು. ಆದರೆ ನೋಟ್ ಬ್ಯಾನ್ ನಂತರ ನಕ್ಸಲ್ ದಾಳಿ ಹಾಗೂ ಸೈನಿಕರ ಸಾವು ಹೆಚ್ಚಾಗಿದೆ ಎಂದು ಆರೋಪಿಸಿದರು. ಜಮ್ಮು ಕಾಶ್ಮೀರದಲ್ಲಿ ಸಹ ಭಯೋತ್ಪಾದಕ ದಾಳಿಗಳು ಹೆಚ್ಚಾಗಿವೆ. ಮೋದಿ ಕನಸಿನ ಕೂಸು ‘ಮೇಕ್ ಇನ್ ಇಂಡಿಯಾ’ ವಿಫಲವಾಗಿದೆ ಎಂದು ದೂರಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Shakeel Ahmad Note ban ನಕ್ಸಲ್ ಜಮ್ಮು ಕಾಶ್ಮೀರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ