ಮಕ್ಕಳಿಂದ ಪ್ರಚಾರ: ರಂಗಾಯಣ ನಿರ್ದೇಶಕನ ವಿರುದ್ಧ ಆಕ್ರೋಶ

Campaign From Children: Outrage Against Rangayana Director

30-04-2018

ಕಲಬುರಗಿ: ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸಬಾರದು ಎಂದು ಕಟ್ಟುನಿಟ್ಟಿನ ನಿಯಮ ವಿದ್ದರೂ ಈ ನಿಯಮವನ್ನು ಉಲ್ಲಂಘಿಸಲಾಗಿದೆ. ಕಲಬುರಗಿ ರಂಗಾಯಣದಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರ ಚಿಣ್ಣರ ಮೇಳದಲ್ಲಿ ಮಕ್ಕಳಿಂದ ಬಿಜೆಪಿ ಪ್ರಚಾರ ಮಾಡಿಸಿದ್ದು ನಿಯಮ ಉಲ್ಲಂಘಿಸಿದ್ದಾರೆ. ರಂಗಾಯಣ ನಿರ್ದೇಶಕ ಮಕ್ಕಳನ್ನು ಬಿಜೆಪಿ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ. ರಂಗಾಯಣ ನಿರ್ದೇಶಕ ಮಹೇಶ ಪಾಟೀಲ ಬಿಜೆಪಿಗೆ ಓಟು ಹಾಕಿ ಅಂತ ಮಕ್ಕಳಿಂದ ರಂಗದ ಮೇಲೆ ಹೇಳಿಸಿದ್ದಾರೆ. ಮಕ್ಕಳು ಬಿಜೆಪಿಗೆ ಓಟು ಹಾಕಿ ಅಂತಾ ಹೇಳಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಮಕ್ಕಳನ್ನು ಬಿಜೆಪಿ ಪ್ರಚಾರಕ್ಕೆ ಬಳಸಿಕೊಂಡಿರುವುದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

Rangayana Social media ಪ್ರಚಾರ ನಿಯಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ