ಮೈಸೂರಲ್ಲಿ ಬಿಎಸ್ ವೈ ರೋಡ್ ಶೋ

B.S.Yeddyurappa road show at mysore

30-04-2018

ಮೈಸೂರು: ರಾಜ್ಯ ವಿಧಾನಸಭಾ ಚುನಾವಣಾ ಹಿನ್ನೆಲೆ, ಮೈಸೂರಿನಲ್ಲಿ ಚುನಾವಣಾ ಕಣ ಕಾವೇರುತ್ತಿದೆ. ಕಳೆದ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಪುತ್ರ ಡಾ.ಯತೀಂದ್ರ ಪರ ಭರ್ಜರಿ ಪ್ರಚಾರ ನಡೆಸಿದ್ದರು. ಇದರ ಬೆನ್ನಲ್ಲೇ ಇಂದು ಮೈಸೂರಿಗೆ ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್.ಯಡಿಯೂರಪ್ಪ ಆಗಮಿಸುತ್ತಿದ್ದಾರೆ. ನರಸಿಂಹರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಸತೀಶ್( ಸಂದೇಶ್ ಸ್ವಾಮಿ) ಪರ ಪ್ರಚಾರ ನಡೆಸಲಿದ್ದಾರೆ. ಇಂದು ಸಂಜೆ ಮೈಸೂರಿನ ಕಲ್ಯಾಣಗಿರಿ ಹಾಗೂ ಎನ್.ಆರ್.ಮೊಹಲ್ಲಾ, ಮಾರುತಿ ಸರ್ಕಲ್ ನ ಸುತ್ತಮುತ್ತಲ ಪ್ರದೇಶಗಳಲ್ಲಿ ಮತಯಾಚಿಸಲಿದ್ದಾರೆ. ಇದಕ್ಕೂ ಮುನ್ನ ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಹೆಬ್ಬಾಳದ ಕುವೆಂಪು ವೃತ್ತದಿಂದ ರೋಡ್ ಶೋ ನಡೆಸಲಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

B.S.Yeddyurappa Road show ಡಾ.ಯತೀಂದ್ರ ಆಫೀಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ