ಕಾಂಗ್ರೆಸ್ ಮುಖಂಡರಿಂದಲೇ ಬಾವುಟ ಹಿಡಿದು ಸಿಎಂ ವಿರುದ್ದ ಪ್ರತಿಭಟನೆ

Kannada News

22-05-2017

ಕೊಪ್ಪಳ :-ಕಾಂಗ್ರೆಸ್ ಮುಖಂಡರಿಂದಲೇ ಭಾವುಟ ಹಿಡಿದು ಸಿಎಂ ವಿರುದ್ದ ಪ್ರತಿಭಟನೆ ನಡೆದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಸಿಎಂ ಸಿದ್ದರಾಮಯ್ಯ ಹಠಾವ್, ಕಾಂಗ್ರೆಸ್ ಬಚಾವ್ ಎಂಬ ಘೋಷಣೆ ಕೂಗಿದ ಅವರು ಸಿದ್ದರಾಮಯ್ಯ ಅವರಿಂದ ಕಾಂಗ್ರೆಸ್ ಸರ್ವನಾಶವಾಗುತ್ತಿದೆ.ಸಿದ್ದರಾಷಮಯ್ಯನವರು ಮೂಲ ಕಾಂಗ್ರೆಸಿಗರನ್ನು ಕಡೆಗಣನೆ ಮಾಡುತ್ತಿದ್ದು, ಗಂಗಾವತಿಯಲ್ಲಿ ಕಾಂಗ್ರೆಸ್ ಕಾರ್ಯ ಸಂಪೂರ್ಣ ನೆಲಸಮವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಪ್ಪಳಕ್ಕೆ ಆಗಮಿಸಿದ ಎಐಸಿಸಿ ಕಾವರ್ಯದರ್ಶಿ ಹಾಗೂ ಕಲಬುರ್ಗಿ ವಿಭಾಗದ ಕಾಂಗ್ರೆಸ್ ವೀಕ್ಷಕ ಶೈಲೇಶನಾಥ ಮುಂದೆ ಕಾಂಗ್ರೆಸ್ ನಾಯಕರಾದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಚ್ ಆರ್ ಶ್ರೀನಾಥ್ ಹಾಗು ಕರಿಯಣ್ಣ ಸಂಗಟಿ ಬೆಂಬಲಿಗರ ಅಸಮಧಾನ ವ್ಯಕ್ತಪಡಿಸಿದರು.

 


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ